2026-04-23 10:59:30

Rukkini shines in a different look | ವಿಭಿನ್ನ ಲುಕ್‌ನಲ್ಲಿ ಮಿಂಚಿದ ರುಕ್ಕಿಣಿ ಟಾಕ್ಸಿಕ್ ನಿರ್ದೇಶಕಿ ಪ್ರತಿಕ್ರಿಯೆ | Speed News Kannada

Rukkini shines in a different look | ವಿಭಿನ್ನ ಲುಕ್‌ನಲ್ಲಿ ಮಿಂಚಿದ ರುಕ್ಕಿಣಿ ಟಾಕ್ಸಿಕ್ ನಿರ್ದೇಶಕಿ ಪ್ರತಿಕ್ರಿಯೆ | Speed News Kannada

ಕಾಂತಾರ ಚಾಪ್ಟರ್ 1ರ ನಟಿ ರುಕ್ಕಿಣಿ ವಸಂತ ಅವರು ಆಗಾಗ ವಿಭಿನ್ನ ವೇಷ ಭೂಷಣದಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಸದ್ಯ ಇವರು ನಟ ಯಶ್ ಅವರ ಜೊತೆ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ ಅವರ ಜೊತೆಗಿನ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದ ಮೂಲಕ ರುಕ್ಕಿಣಿ ವಸಂತ್ ಅವರು ತಮ್ಮ ಸಿನಿ ಪಯಣ ಆರಂಭಿಸಿದರು. ನಟಿ ರುಕ್ಕಿಣಿ ವಸಂತ್ ಅವರು ಇತ್ತೀಚೆಗೆ ತಮ್ಮ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೊಗಳಿಗೆ ಚಿತ್ರರಂಗದ ಪ್ರಮುಖರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ವಿಶೇಷವಾಗಿ, ನಿರ್ದೇಶಕಿ ಗೀತು ಮೋಹನದಾಸ್, ಸಪ್ತಮಿ ಗೌಡ, ಕಿಚ್ಚ ಸುದೀಪ್ ಮಗಳು ಸಾನ್ವಿ ಸೇರಿದಂತೆ ಅನೇಕರು ರುಕ್ಕಿಣಿ ಅವರ ಫೋಟೊಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಚಿತ್ರಗಳಿಗೆ ಅಭಿಮಾನಿಗಳ ಜೊತೆಗೆ ನಿರ್ದೇಶಕಿ ಗೀತು ಮೋಹನದಾಸ್ ಕೂಡ ಪ್ರತಿಕ್ರಿಯೆ ನೀಡಿದ್ದು, ಅವರು ಬೆಂಕಿಯ ಎಮೋಜಿ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಭಿನ್ನವಾದ ಲುಕ್‌ನಲ್ಲಿ ಫೋಟೊ ಶೂಟ್ ಮಾಡಿಸಿಕೊಂಡಿರುವ ರುಕ್ಕಿಣಿ ಅವರು ತೀಕ್ಷ ನೋಟದಿಂದ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಅವರು ಕುತ್ತಿಗೆಗೆ ಯಾವುದೇ ಆಭರಣ ಧರಿಸಿಕೊಂಡಿಲ್ಲ. ನೋಸ್ ರಿಂಗ್ ಧರಿಸಿದ್ದಾರೆ. ಇದರ ಜೊತೆಗೆ ಎಡಗೈಯಲ್ಲಿ ಮೂರರಿಂದ ನಾಲ್ಕು ಉಂಗುರಗಳನ್ನು ಧರಿಸಿದ್ದಾರೆ. ಈ ಫೋಟೊಗಳನ್ನು ವೈಷ್ಣವ್ ಪ್ರವೀಣ್ ಕ್ಲಿಕ್ಕಿಸಿದ್ದಾರೆ. ರುಕ್ಕು ಸದ್ಯ ಟಾಕ್ಸಿಕ್ ಸಿನಿಮಾದಲ್ಲಿ ಮೆಲ್ಲಿಸಾ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಸಿನಿಮಾದಲ್ಲಿನ ಪಾತ್ರದ ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು. ಕೆಲ ಸಂದರ್ಶನದಲ್ಲಿ ಕಾಂತಾರ ಚಾಪ್ಟರ್ 1 ಸಿನಿಮಾ ನನಗೆ ಯಾವಾಗಲೂ ವಿಶೇಷ ಎಂದು ಅವರು ಹೇಳಿಕೊಂಡಿದ್ದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.