2026-04-24 02:51:39

RTO shock for modified vehicles in Mysore|ಮೈಸೂರಿನಲ್ಲಿ ಮಾಡಿಫೈಡ್ ವಾಹನಗಳಿಗೆ ಆರ್.ಟಿ.ಓ ಶಾಕ್|Speed News Kannada

RTO shock for modified vehicles in Mysore|ಮೈಸೂರಿನಲ್ಲಿ ಮಾಡಿಫೈಡ್ ವಾಹನಗಳಿಗೆ ಆರ್.ಟಿ.ಓ ಶಾಕ್|Speed News Kannada

ಹೊರ ರಾಜ್ಯದಿಂದ ಕಡಿಮೆ ಬೆಲೆಗೆ ವಾಹನ ತಂದು, ಮನೆಬಂದಂತೆ ಆಲ್ಟರ್ ಮಾಡಿ ರಸ್ತೆಗಳಲ್ಲಿ ಸ್ಟೈಲ್ ಮಾಡುತ್ತಿದ್ದ ಯುವಕರು ಇದೀಗ ಕಾನೂನು ಉಲ್ಲಂಘನೆಗೆ ಒಳಪಟ್ಟಿದ್ದಾರೆ. ಮೈಸೂರು ಬಲ್ಲಾಳ ಸರ್ಕಲ್‌ನಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಮಿಂಚಿನ ಕಾರ್ಯಾಚರಣೆ: ನೈಜ ಸ್ವರೂಪ ಬದಲಾಯಿಸಿದ ಮಹೀಂದ್ರಾ ಜೀಪ್, ತೆರಿಗೆ ಪಾವತಿಸದ ಫಾರ್ಚುನರ್, ಇನ್ನೋವಾ ಮತ್ತು ಎಫ್.ಸಿ ಇಲ್ಲದ ಎರಡು ಸ್ಕೂಲ್ ಬಸ್‌ಗಳನ್ನು ವಶಕ್ಕೆ ಪಡೆದುಕೊಂಡರು.

ಚಾಮರಾಜನಗರ ಮೂಲದ ಬಿ.ಕಾಂ ವಿದ್ಯಾರ್ಥಿ ಪಂಜಾಬ್‌ನಿಂದ ಹಳೆಯ ಮಹೀಂದ್ರಾ ಜೀಪ್ ತಂದು 33 ಸೆಂ.ಮೀ ಅಗಲದ ಟೈರ್ ಹಾಕಿ ಅದನ್ನು ಸ್ಟೈಲಿಶ್ ಮಾಡಿಸಿದ್ದ. ರಸ್ತೆ ಸುರಕ್ಷತೆಗೆ ಅಪಾಯಕಾರಿಯಾದ ಈ ಜೀಪ್ ಈಗ ವಶಕ್ಕೆ ಪಡೆಯಲ್ಪಟ್ಟಿದೆ. ಆರ್.ಟಿ.ಓ ಸೂಚನೆ: ಹೊರ ರಾಜ್ಯದ ವಾಹನ ತರುವ ಮೊದಲು ತೆರಿಗೆ ಪಾವತಿಸಿ, ನಿಯಮ ಮೀರಿ ಯಾವುದೇ ಆಲ್ಟರೇಷನ್ ಮಾಡಬಾರದು

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.