ಇಂಡಿಯನ್ ಪ್ರೀಮಿಯರ್ ಲೀಗ್ನ 26ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಆರ್‌ಸಿಬಿ ಆಟಗಾರರು ಗ್ರೀನ್ ಜೆರ್ಸಿ ಧರಿಸಿ ಕಣಕ್ಕಿಳಿಯಲಿದೆ. ಪ್ರತಿ ವರ್ಷ ಒಂದು ಪಂದ್ಯದಲ್ಲಿ ಆರ್‌ಸಿಬಿ ತನ್ನ ಸಾಂಪ್ರದಾಯಿಕ ಬಣ್ಣವನ್ನು ಬದಿಗಿಟ್ಟು ‘ಹಸಿರು’ ಉಡುಗೆಯಲ್ಲಿ ಕಣಕ್ಕಿಳಿಯುತ್ತದೆ. ಇದರ ಉದ್ದೇಶವೇನೆಂದರೆ 2011ರಿಂದ ಆರ್‌ಸಿಬಿ ಆರಂಭಿಸಿದ ಈ ‘ಗೊ ಗ್ರೀನ್’ (Go Green) ಅಭಿಯಾನವು ಪರಿಸರ ಸಂರಕ್ಷಣೆ ಮತ್ತು ಜಾಗತಿಕ ತಾಪಮಾನ ಏರಿಕೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದೆ. ಈ ಜೆರ್ಸಿಯು ಕೇವಲ ಬಣ್ಣದಿಂದ ಮಾತ್ರ ಹಸಿರಲ್ಲ, ಅದರ ತಯಾರಿಕೆಯಲ್ಲೂ ಪರಿಸರ ಸ್ನೇಹಿ ತಂತ್ರಜ್ಞಾನ ಅಡಗಿದೆ. ಆದ್ರೆ ಈ ಬಾರಿ ಆಡಲಿರುವ ಆರ್‌ಸಿಬಿಯು ಹಸಿರು ಜೆರ್ಸಿಯನ್ನು ಮೈದಾನ ಮತ್ತು ಸುತ್ತಮುತ್ತ ಸಂಗ್ರಹಿಸಲಾದ ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಹಳೆಯ ಬಟ್ಟೆಗಳನ್ನು ಮರುಬಳಕೆಮಾಡಿ ತಯಾರಿಸಲಾಗಿದೆ. ಇದು ‘ತ್ಯಾಜ್ಯದಿಂದ ಸಂಪತ್ತು’ ಎಂಬ ಸಂದೇಶ ಸಾರುತ್ತಿದೆ.