2026-04-24 12:19:00

RCB team training begins at Chinnaswamy | ಚಿನ್ನಸ್ವಾಮಿಯಲ್ಲಿ RCB ತಂಡದ ತಾಲೀಮು ಪ್ರಾರಂಭ | Speed News kannada

RCB team training begins at Chinnaswamy | ಚಿನ್ನಸ್ವಾಮಿಯಲ್ಲಿ RCB ತಂಡದ ತಾಲೀಮು ಪ್ರಾರಂಭ | Speed News kannada

ಇಂಡಿಯನ್‌ ಪ್ರೀಮಿಯರ್‌ ಲೀಗ್‌ 19ನೇ ಆವೃತ್ತಿಯು ಮಾರ್ಚ್‌ 28 ರಂದು ಶುರುವಾಗುತ್ತಿದೆ, ಅರ್‌ಸಿಬಿ ಮತ್ತು ಎಸ್‌ಆರ್‌ಹೆಚ್‌ ತಂಡಗಳು ಉದ್ಘಾಟನಾ ಪಂದ್ಯ ಆಡಲು ಸಜ್ಜಾಗುತ್ತಿದ್ದು.. ಟಿಕೆಟ್ ಮಾರಾಟ ಮತ್ತು ಅಭಿಮಾನಿಗಳ ವ್ಯವಸ್ಥೆಯ ಬಗ್ಗೆ ಮಾಹಿತಿ ಬಿಡುಗಡೆಯಾಗಿದೆ ಇದರ ಕಂಪ್ಲೀಟ್‌ ಮಾಹಿತಿ ಇಲ್ಲಿದೆ. 
 ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಉದ್ಘಾಟನಾ ಪಂದ್ಯ  ಚಿನ್ನಸ್ವಾಮಿಯಲ್ಲಿ RCB ತಂಡದ ತಾಲೀಮು ಪ್ರಾರಂಭ ಭಾರತದ ಕ್ರಿಕೆಟ್‌ ಹಬ್ಬ ಎಂದೆ ಕರೆಸಿಕೊಳ್ಳುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ 19ನೇ ಅವೃತ್ತಿಯು ಶುರುವಾಗಲು ಕೆಲವೇ ದಿನಗಳು ಬಾಕಿ ಇದೆ. ಕಳೆದ ವರ್ಷ ಚಾಂಪಿಯನ್‌ ಆಗುವುದರೊಂದಿಗೆ ಕೊನೆಗೂ 18 ವರ್ಷಗಳ ಐಪಿಎಲ್‌ ಪ್ರಶಸ್ತಿ ಬರ ನೀಗಿಸಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಈ ಬಾರಿಯು ಪ್ರಶಸ್ತಿಯನ್ನು ತನ್ನಲೇ ಉಳಿಸಿಕೊಳ್ಳಲು ಸಜ್ಜಾಗುತ್ತಿದ್ದು, ಮೈದಾನ ಚಿನ್ನಸ್ವಾಮಿಯಲ್ಲಿ ಅಭ್ಯಾಸ ಆರಂಭಿಸಿದೆ. 
ಕಳೆದ ಐಪಿಎಲ್‌ ವಿಜಯೋತ್ಸವದ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟ ನಂತರ ಆರ್‌ಸಿಬಿ ಚಿನ್ನಸ್ವಾಮಿ ಮೈದಾನದಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ಮತ್ತೆ ಕಣಕೀಳಿಯುತ್ತಿದ್ದು, ಇದೇ ತಿಂಗಳ 28ರಿಂದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ವಿರುದ್ದ ಉದ್ಘಾಟನಾ ಪಂದ್ಯ ಆಡಲು ಭರ್ಜರಿ ಸಿದ್ದತೆ ನಡೆಸಿಕೊಂಡಿದೆ. ಈಗಾಗಲೇ ಬೆಂಗಳೂರಿಗೆ ಆಗಮಿಸಿದ ತಂಡದ ಬ್ಯಾಟಿಂಗ್‌ ತಾರೆ ಹಾಗೂ ದಿಗ್ಗಜ ಆಟಗಾರ ವಿರಾಟ್‌ ಕೊಹ್ಲಿ, ನಾಯಕ ರಜತ್‌ ಪಾಟೀದಾರ್‌, ಲೋಕಲ್‌ ಬಾಯ್‌ ದೇವದತ್‌ ಪಡಿಕ್ಕಲ್‌ ಸೇರಿದಂತೆ ತಂಡದ ಬಹುತೇಕ ಸದಸ್ಯರು ನೆಟ್ಸ್‌ನಲ್ಲಿ ಸಾಕಷ್ಟು ಹೊತ್ತು ತಾಲೀಮು ನಡೆಸಿದ್ದಾರೆ. ಇದರೊಂದಿಗೆ ಒಂದು ವರ್ಷದ ನಂತರ ಚಿನ್ನಸ್ವಾಮಿಯಲ್ಲಿ 'ರೆಡ್‌ ಆರ್ಮಿ' ಮತ್ತೆ ರಂಗೇರಲಿದೆ.
 ಟಿಕೆಟ್ ಖರೀದಿ ಬಗ್ಗೆ ಮಾಹಿತಿ ನೀಡಿದ RCB ಮ್ಯಾನೇಜ್ಮೆಂಟ್ ಟಿಕೆಟ್ ಖರೀದಿಸಿದ್ರೆ ಪಂದ್ಯದ ದಿನಗಳಲ್ಲಿ ಮೆಟ್ರೋ ಪ್ರಯಾಣ ಉಚಿತ ಆರ್‌ಸಿಬಿ ಅಭಿಮಾನಿಗಳು ತನ್ನ ನೆಚ್ಚಿನ ತಂಡ ಮೊದಲ ಪಂದ್ಯವನ್ನು ತವರಿನಲ್ಲಿ ಆಡುವುದನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಆರ್ಸಿಬಿ ಫ್ರಾಂಚೈಸಿ ಕೂಡ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಉದ್ಘಾಟನಾ ಪಂದ್ಯ ಆರಂಭಕ್ಕೆ 8 ದಿನ ಬಾಕಿ ಇರುವಾಗ ಮೊದಲ ಪಂದ್ಯದ ಟಿಕೆಟ್ ಖರೀದಿಯ ಬಗ್ಗೆ ಆರ್ಸಿಬಿ ಮಹತ್ವದ ಮಾಹಿತಿ ಬಿಡುಗಡೆ ಮಾಡಿದ್ದು, ಟಿಕೆಟ್‌ ಕನಿಷ್ಠ ಮೊತ್ತ 2300 ರಿಂದ 42 ಸಾವಿರದ ವರೆಗೆ ಇದ್ದು, ಉದ್ಘಾಟನಾ ಪಂದ್ಯ ಆರಂಭಕ್ಕೆ 8 ದಿನ ಬಾಕಿ ಇರುವಾಗ ಮೊದಲ ಪಂದ್ಯದ ಟಿಕೆಟ್ ಖರೀದಿಯ ಬಗ್ಗೆ ಆರ್ಸಿಬಿ ಹಂಚಿಕೊಂಡಿದೆ. ಅಲ್ಲದೆ ಇತರೆ ಮೂಲಗಳಿಂದ ಟಿಕೆಟ್ ಖರೀದಿಸಲು ಪ್ರಯತ್ನಿಸಿ ಮೋಸ ಹೋಗದಂತೆಯೂ ಎಚ್ಚರಿಕೆ ನೀಡಿದೆ. ಟಿಕೆಟ್ ಮಾರಾಟ ಪ್ರಾರಂಭವಾದ ನಂತರ ಟಿಕೆಟ್‌ಗಳನ್ನು ಅಧಿಕೃತ ಪ್ಲಾಟ್‌ಫಾರ್ಮ್‌ಗಳ ಮೂಲಕ ಮಾತ್ರ ಖರೀದಿಸಬೇಕು ಎಂದು ಆರ್ಸಿಬಿ ಒತ್ತಿ ಹೇಳಿದೆ.
ಇನ್ನು ಅಭಿಮಾನಿಗಳು ಗಮನಿಸಬೇಕಾದ ಇನ್ನೊಂದು ಸಂಗತಿ ಏನೆಂದ್ರೆ ಟಿಕೆಟ್‌ ಖರೀದಿಸಿದವರಿಗೆ ಮೆಟ್ರೋ ಪ್ರಯಾಣ ಉಚಿತ ಎಂದು ಗೋಷಣೆ ಮಾಡಿದೆ. ಹಾಗಯೇ ಅಭಿಮಾನಿಗಳು ಟಿಕೆಟ್‌ಗಳನ್ನು ಖರೀದಿಸುವಾಗಲೇ ಸೀಮಿತ ಪಾರ್ಕಿಂಗ್ ಸ್ಥಳಗಳನ್ನು ಮುಂಗಡವಾಗಿ ಬುಕ್ ಮಾಡುವ ಆಯ್ಕೆಯನ್ನು ಫ್ರಾಂಚೈಸಿ ಹೇಳಿದೆ.  ಕ್ರೀಡಾಂಗಣದ ಬಳಿ ಪಿಕ್-ಅಪ್ ಮತ್ತು ಡ್ರಾಪ್‌ಗಾಗಿ ಶಟಲ್ ಸೇವೆಗಳನ್ನು ಸಹ ಪಡೆಯಬಹುದಾಗಿದ್ದು,  ಟಿಕೆಟ್ ಹೊಂದಿರುವ ಪ್ರೇಕ್ಷಕರು ಕ್ರೀಡಾಂಗಣದೊಳಕ್ಕೆ ಕಬ್ಬನ್ ರಸ್ತೆ ಮತ್ತು ಲಿಂಕ್ ರಸ್ತೆ ಮೂಲಕ ಮಾತ್ರ ಪ್ರವೇಶಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಜನಸಂದಣಿ ನಿರ್ವಹಣೆಗಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಮ್ಯಾನೇಜ್ಮೆಂಟ್ ತಿಳಿಸಿದೆ.  IPLನಲ್ಲಿ ಆರ್‌ಸಿಬಿ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿದ್ದು, ಜನರ ಸುರಕ್ಷತೆಯ ಸಲುವಾಗಿ  ಆರ್‌ಸಿಬಿ ಫ್ರಾಂಚೈಸಿ ಈ ರೀತಿಯ ವ್ಯವಸ್ಥೆಯನ್ನು ಏರ್ಪಡಿಸಿದ್ದು, ಕ್ರೀಡಾಂಗಣದಲ್ಲಿನ ಸುರಕ್ಷತೆ ಹಾಗೂ ಜನಸಂದಣಿಯನ್ನು ಕಡಿಮೆ ಮಾಡಲು ತಯಾರಿ ಮಾಡಿಕೊಂಡಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.