2026-04-24 12:19:10

RCB sold for Rs 16,600 crore | ರಾಜಸ್ಥಾನ್‌ ರಾಯಲ್ಸ್‌ ದಾಖಲೆ ಮುರಿದ ಆರ್‌ಸಿಬಿ, 16,600 ಕೋಟಿ ರೂಗೆ RCB ಸೇಲ್ | Speed news kannada

RCB sold for Rs 16,600 crore | ರಾಜಸ್ಥಾನ್‌ ರಾಯಲ್ಸ್‌ ದಾಖಲೆ ಮುರಿದ ಆರ್‌ಸಿಬಿ, 16,600 ಕೋಟಿ ರೂಗೆ RCB ಸೇಲ್ | Speed news kannada

ಐಪಿಎಲ್‌ನಲ್ಲಿ ಅತಿ ಹೆಚ್ಚು ಫ್ಯಾನ್ಸ್‌ ಬೇಸ್‌ ಇರುವ ಏಕೈಕ ತಂಡವೆಂದರೆ ಅದು ಆರ್‌ಸಿಬಿ  ಇದೀಗ IPL ಇತಿಹಾಸದಲ್ಲೇ ಆರ್‌ಸಿಬಿ ಕೊನೆಗೂ ದೊಡ್ಡ ಮಟ್ಟದಲ್ಲಿ ಮಾರಟವಾಗಿದೆ. ಕುಮಾರ್ ಮಂಗಲಂ ಬಿರ್ಲಾ ಅವರ ಆದಿತ್ಯ ಬಿರ್ಲಾ ಗ್ರೂಪ್ ನೇತೃತ್ವದ ಕನ್ಸೋರ್ಟಿಯಂ ಒಕ್ಕೂಟವು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರಿನ ಹೊಸ ಮಾಲೀಕರಾಗಿದ್ದಾರೆ. ನಿನ್ನೆಯಷ್ಟೇ ರಾಜಸ್ಥಾನ್‌ ರಾಯಲ್ಸ್‌ 15,286 ಕೋಟಿ ಮಾರಟವಾಗಿತ್ತು, ಆದ್ರೆ ಇದೀಗ ಆರ್‌ಸಿಬಿ ತಂಡವು ಆರ್‌ಆರ್‌ ದಾಖಲೆ ಮುರಿದು 16,600 ಸಾವಿರಕ್ಕೆ ಮಾರಟವಾಗಿದ್ದು ಐಪಿಎಲ್‌ ಇತಿಹಾಸದಲ್ಲೇ ದೊಡ್ಡ ಮೊತ್ತದಲ್ಲಿ ಮಾರಟವಾ ಫ್ರಾಂಚೈಸಿಯಾಗಿದೆ. ಭಾರತೀಯ ಉದ್ಯಮಿ ಕುಮಾರ್ ಮಂಗಳಂ ಬಿರ್ಲಾ ಅವರ ಆದಿತ್ಯ ಬಿರ್ಲಾ ಗ್ರೂಪ್, ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಡೇವಿಡ್ ಬ್ಲಿಟ್ಜರ್‌ನ ಬೋಲ್ಟ್ ವೆಂಚರ್ಸ್ ಮತ್ತು ಯುಎಸ್ ಮೂಲದ ಬ್ಲಾಕ್‌ಸ್ಟೋನ್ ಒಳಗೊಂಡಿರುವ ಕನ್ಸೋರ್ಟಿಯಂ ಸುಮಾರು 1.78 ಶತಕೋಟಿ ಡಾಲರ್ ಅಂದ್ರೆ 16,600 ಕೋಟಿಗಿಂತ ಹೆಚ್ಚು ಹಣವನ್ನು ಪಾವತಿಸಲಿದೆ ಎಂದು ತಿಳಿದುಬಂದಿದೆ. ಕಳೆದ ಎರಡು ದಶಕಗಳಲ್ಲಿ ಐಪಿಎಲ್ ಜಾಗತಿಕ ಕ್ರೀಡಾ ಪವರ್ ಹೌಸ್ ಆಗಿ ಬೆಳೆದಿದ್ದು, ಭಾರತೀಯ ಕ್ರಿಕೆಟ್‌ನ ಸ್ವರೂಪವನ್ನು ಬದಲಾಯಿಸಿದೆ. ಆಧುನಿಕ ಕ್ರೀಡೆಯಲ್ಲಿ ಅತ್ಯಂತ ಬಲವಾದ ಫ್ರಾಂಚೈಸಿಗಳಲ್ಲಿ ಒಂದಾಗಿರುವ ಆರ್‌ಸಿಬಿ, ಆದಿತ್ಯ ಬಿರ್ಲಾ ಗ್ರೂಪ್‌ಗೆ ತನ್ನ ಪರಂಪರೆ ವಿಸ್ತರಿಸಲು ಒಂದು ವಿಶಿಷ್ಟ ವೇದಿಕೆಯನ್ನು ನೀಡುತ್ತಿದೆ. ಈ ಆಸ್ತಿ ಮತ್ತು ಅಸಾಮಾನ್ಯ ಪರಂಪರೆಯನ್ನು ಮತ್ತಷ್ಟು ನಿರ್ಮಿಸಲು ಬದ್ಧವಾಗಿದೆ ಎಂದು ಆದಿತ್ಯ ಬಿರ್ಲಾ ಗ್ರೂಪ್‌ನ ಅಧ್ಯಕ್ಷ ಕುಮಾರ್ ಮಂಗಳಂ ಬಿರ್ಲಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.