ಆದಿತ್ಯ ಧಾರ್ ನಿರ್ದೇಶನದ, ನಟ ರಣವೀರ್ ಸಿಂಗ್ ಅಭಿನಯದ 'ಧುರಂಧರ್ 2' ಸಿನಿಮಾ ಭರ್ಜರಿ ಯಶಸ್ಸು ಗಳಿಸಿದೆ. ಬಿಡುಗಡೆಯಾದ ಕೇವಲ ನಾಲ್ಕು ದಿನಗಳಲ್ಲಿ ₹450 ಕೋಟಿ ಗಳಿಸಿ, ಹಲವು ದಾಖಲೆಗಳನ್ನು ಮುರಿದಿದೆ. ಹಮ್ಮಾ ಮತ್ತು ಸಿಂಗ್ ರಂಗಿ ಎಂಬ ಎರಡು ಪಾತ್ರಗಳಲ್ಲಿ ರಣವೀರ್ ಸಿಂಗ್ ನಟಿಸಿ ಪ್ರೇಕ್ಷಕರ ಮನಗೆದ್ದಿದ್ದಾರೆ. ಇದೀಗ ನಟ ರಣವೀರ್ ಸಿಂಗ್ ಅವರ ತೆರೆ ಹಿಂದಿನ ಮೇಕಪ್ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಸೆಲೆಬ್ರಿಟಿ ಮೇಕಪ್ ಕಲಾವಿದೆಯಾದ ಪ್ರೀತಿಶೀಲ್ ಸಿಂಗ್ ಅವರು ಇನ್ ಸ್ಟಾಗ್ರಾಂನಲ್ಲಿ ರಣವೀರ್ ಅವರಿಗೆ ಮೇಕಪ್ ಮಾಡುತ್ತಿರುವ ತುಣುಕನ್ನು ಹಂಚಿಕೊಂಡಿದ್ದಾರೆ.
ಅದರಲ್ಲಿ ರಣವೀರ್ ಸಿಂಗ್ ಅವರ ಮುಖವನ್ನು ಸಂಪೂರ್ಣವಾಗಿ ಭೂತದ ರೀತಿಯಲ್ಲಿ ಮೇಕಪ್ ಮಾಡಿದ್ದಾರೆ. ಅದನ್ನು 'ನೆರಳುಗಳಿಂದ ಹುಟ್ಟಿದ ಭೂತ' ಎಂದು ಅಡಿಬರಹ ಬರೆದುಕೊಂಡಿದ್ದಾರೆ. ಇದೇ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಇದನ್ನು ನೋಡಿದ ಅಭಿಮಾನಿಗಳು ಹಾಗೂ ನೆಟ್ಟಿಗರು ದಂಗಾಗಿದ್ದಾರೆ. ಅಲ್ಲದೇ ನಟನ ತಾಳ್ಮೆ ಹಾಗೂ ತಂಡದ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.