ಇಂಡಿಯನ್ ಪ್ರೀಮಿಯರ್ ಲೀಗ್ IPL ಇತಿಹಾಸದಲ್ಲೇ ಅತ್ಯಂತ ದೊಡ್ಡ ಮೊತ್ತದ ಡೀಲ್ ಒಂದು ನಡೆದಿದೆ. ರಾಜಸ್ಥಾನ ರಾಯಲ್ಸ್ ತಂಡದ ಮಾಲೀಕತ್ವದ ರೇಸ್ ಕೊನೆಗೊಂಡಿದ್ದು, ಅಮೆರಿಕ ಮೂಲದ ಉದ್ಯಮಿ ಕಲ್ ಸೋಮನಿ ನೇತೃತ್ವದ ಒಕ್ಕೂಟವು ತಂಡವನ್ನು ಬರೋಬ್ಬರಿ 1.63 ಬಿಲಿಯನ್ ಡಾಲರ್ ಅಂದ್ರೆ, ಸುಮಾರು 15,286 ಕೋಟಿ ರೂ. ಮೌಲ್ಯಕ್ಕೆ ಖರೀದಿಸಿದೆ. ಈ ಒಪ್ಪಂದದೊಂದಿಗೆ ರಾಜಸ್ಥಾನ ರಾಯಲ್ಸ್ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಫ್ರಾಂಚೈಸಿಯಾಗಿ ಹೊರಹೊಮ್ಮಿದೆ. ಈ ಹಿಂದೆ 2008ರಿಂದ ಇಲ್ಲಿಯವರೆಗೂ ಎಮರ್ಜಿಂಗ್ ಮೀಡಿಯಾ ವೆಂಚರ್ಸ್ ಹೊಂದಿತ್ತು. ಮನೋಜ್ ಬದಲೆ ಮೊದಲು ಈ ಫ್ರಾಂಚೈಸಿಯನ್ನು $67 ಬಿಲಿಯನ್‌ಗೆ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದ್ರೆ ಇದೀಗ ಅತೀ ಹೆಚ್ಚಿನ ಮೊತ್ತಕ್ಕೆ ರಾಜಸ್ತಾನ್ ರಾಯಲ್ಸ್ ಮಾರಟವಾಗಿದೆ.