2026-03-07 07:23:37

PSI assaults man who went to police station on bail | ಜಾಮೀನು ಪಡೆದು ಠಾಣೆಗೆ ಹೋದ ವ್ಯಕ್ತಿ ಮೇಲೆ PSI ಹಲ್ಲೆ ಪ್ರಕರಣ ದಾಖಲು | Speed News Kannada

PSI assaults man who went to police station on bail | ಜಾಮೀನು ಪಡೆದು ಠಾಣೆಗೆ ಹೋದ ವ್ಯಕ್ತಿ ಮೇಲೆ PSI ಹಲ್ಲೆ ಪ್ರಕರಣ ದಾಖಲು | Speed News Kannada

ಬೆಂಗಳೂರು: ನಿರೀಕ್ಷಣಾ ಜಾಮೀನು ಪಡೆದು ಠಾಣೆಗೆ ಹೋಗಿದ್ದ ವ್ಯಕ್ತಿಯ ಮೇಲೆ ಪಿಎಸ್‌ಐ ಹಲ್ಲೆ ನಡೆಸಿರುವ ಘಟನೆ ಬೆಂಂಗಳೂರಿನ ಮಾಗಡಿ ರೋಡ್ ಠಾಣೆಯಲ್ಲಿ ನಡೆದಿದೆ.
ಪಿಎಸ್‌ಐ ಕೌಶಿಕ್ ವಿರುದ್ಧ ಆರೋಪ ಕೇಳಿಬಂದಿದ್ದು, ಮಾಗಡೀ ರೋಡ್ ಠಾಣೆಯಲ್ಲಿಯೇ ಕೌಶಿಕ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.ನಿರೀಕ್ಷಣಾ ಜಾಮೀನು ಪ್ರತಿ ಹಿಡಿದು ಠಾಣೆಗೆ ಬಂದಿದ್ದ ಆರೋಪಿ ಮೇಲೆ ಪಿಎಸ್‌ಐ ಕೌಶಿಕ್ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅವಿನಾಶ್ ಎಂಬಾತ ಕೋರ್ಟ್ ಮೂಲಕ ಪಿಎಸ್‌ಐ ವಿರುದ್ಧ ಖಾಸಗಿ ದೂರು ದಾಖಲಿಸಿದ್ದು, ಕೋರ್ಟ್ ಆದೇಶದಂತೆ ಪಿಎಸ್‌ಐ ಕೌಶಿಕ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.