ಮಂಡ್ಯ ಜಿಲ್ಲೆ ಶ್ರೀ ಆದಿಚುಂಚನಗಿರಿ ಕ್ಷೇತ್ರಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದ್ದಾರೆ. ಪ್ರಧಾನಿಗಳು ಶ್ರೀ ಗುರು ಭೈರವೈಕ್ಯ ಮಂದಿರವನ್ನು ಉದ್ಘಾಟಿಸಿ, ಆದಿಚುಂಚನಗಿರಿಗೆ ಮೋದಿಯ ಮೊದಲ ಭೇಟಿ ನೀಡಿದ್ದಾರೆ. ದೆಹಲಿಯಿಂದ ಪ್ರಧಾನಿ ಮೋದಿಯವರು 10:05ಕ್ಕೆ ಹೆಚ್‌ಎಎಲ್‌ಗೆ ಆಗಮಿಸಿದ್ದರು. ಈ ವೇಳೆ ಮೋದಿಗೆ ಶ್ರೀ ಮಠದವರು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಕಾಲಭೈರವೇಶ್ವರನಿಗೆ ಪ್ರಧಾನಿ ಮೋದಿ ಪೂಜೆ ಮಾಡಿದ್ದು, ನಂತರ ಭೈರವೈಕ ಮಂದಿರ ಲೋಕಾರ್ಪಣೆ ಮಾಡಲಿದ್ದಾರೆ. ಇನ್ನೂ ಮೋದಿ ಸ್ವಾಗತಕ್ಕಾಗಿ ಮೈಸೂರು ಪೇಟವನ್ನು ತಯಾರು ಮಾಡಲಾಗಿದೆ. ಮೈಸೂರು ಸಂಸ್ಥಾನ ಒಡೆಯರ್ ಧರಿಸುತ್ತಿದ್ದ ಮಾದರಿಯಲ್ಲಿ ಪೇಟವನ್ನು ತಯಾರು ಮಾಡಲಾಗಿದ್ದು, ಪೇಟಕ್ಕೆ ಮೈಸೂರು ರೇಷ್ಮೆ, ಬನಾರಸ್ ಸಾಫ್ಟ್ ಸಿಲ್ಕ್ ಹಾಗೂ ಮೈಸೂರಿನ ರಾಜಲಾಂಛನವಾದ ಗಂಡಬೇರುಂಡವನ್ನು ಬಳಸಿಕೊಂಡು ಪೇಟವನ್ನು ರಚಿಸಲಾಗಿದೆ.