2026-04-24 02:51:39

President Murmu visits Ramjanmabhoomi | ರಾಮಜನ್ಮ ಭೂಮಿಗೆ ರಾಷ್ಟ್ರಪತಿ ಮುರ್ಮು ಭೇಟಿ ಬಾಲರಾಮ ಸನ್ನಿಧಾನದಲ್ಲಿ ಚಿನ್ನ ಲೇಪಿತ ಲೋಹದ ತಟ್ಟೆ ಪ್ರತಿಷ್ಠಾಪನೆ | Speed News Kannada

President Murmu visits Ramjanmabhoomi | ರಾಮಜನ್ಮ ಭೂಮಿಗೆ ರಾಷ್ಟ್ರಪತಿ ಮುರ್ಮು ಭೇಟಿ ಬಾಲರಾಮ ಸನ್ನಿಧಾನದಲ್ಲಿ ಚಿನ್ನ ಲೇಪಿತ ಲೋಹದ ತಟ್ಟೆ ಪ್ರತಿಷ್ಠಾಪನೆ | Speed News Kannada

ಗುಜರಾತ್: ರಾಮಜನ್ಮ ಭೂಮಿ ಅಯೋಧ್ಯೆಯ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ರಾಷ್ಟ್ರಪತಿ ದೌಪದಿ ಮುರ್ಮು ಅವರು ಭಕ್ತಿಪೂರ್ವಕ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ವೇಳೆ 150 ಕೆಜಿ ತೂಕದ, ಬಂಗಾರದ ಲೇಪನವಿರುವ ಶ್ರೀರಾಮ ಯಂತ್ರವನ್ನು ಮಂದಿರದಲ್ಲಿ ಸ್ಥಾಪಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉಪಸ್ಥಿತರಿದ್ದರು. ಅನೇಕ ಗಣ್ಯರ ಸಮ್ಮುಖದಲ್ಲಿ ಈ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗಿದೆ.
ಬಾಲರಾಮನಿಗೆ ಸಮರ್ಪಿಸಲಾದ ಯಂತ್ರ ವಿಶೇಷತೆಯಿಂದ ಕೂಡಿದ್ದು ವೇದ ಗಣಿತದ ತತ್ವಗಳನ್ನಾಧರಿಸಿ ಸಿದ್ಧಪಡಿಸಲಾದ ಲೋಹದ ತಟ್ಟೆ ಸಕಾರಾತ್ಮಕ ಶಕ್ತಿಯ ಕೇಂದ್ರವಾಗಲಿದೆ. ಎಂದು ನಂಬಲಾಗಿದೆ. ಕಾಂಚಿ ಕಾಮಕೋಟಿ ಪೀಠದ ಮಾರ್ಗದರ್ಶನದಲ್ಲಿ ತಯಾರಾದ ಈ ಯಂತ್ರವನ್ನು ಎರಡು ವರ್ಷಗಳ ಹಿಂದೆಯೇ ತಿರುಪತಿಯಿಂದ ಅಯೋಧ್ಯೆಗೆ ತರಲಾಗಿತ್ತು.
ಈ ಎಲ್ಲಾ ಪೂಜಾ ಕಾರ್ಯಕ್ರಮದ ನಂತರ ರಾಷ್ಟ್ರಪತಿಗಳು ರಾಮಲಲ್ಲಾನಿಗೆ ಆರತಿ ಬೆಳಗಿ, ದೇಶದ ಜನರ ಸುಖ-ಶಾಂತಿಗಾಗಿ ಹರಸುವಂತೆ ಬೇಡಿಕೊಂಡರು. ಗಣ್ಯರ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮ ಕ್ಷೇತ್ರದ ಆಧ್ಯಾತ್ಮಿಕ ಕಳೆಯನ್ನು ಇನ್ನಷ್ಟು ಹೆಚ್ಚಿಸಿತು. 

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.