2026-04-23 10:49:06

Pakistan PSL| ಪಾಕಿಸ್ತಾನದ PSL ಲೀಗ್‌ ತೊರೆದ 8 ವಿದೇಶಿ ಆಟಗಾರರು | Speed news kannada

Pakistan PSL| ಪಾಕಿಸ್ತಾನದ PSL ಲೀಗ್‌ ತೊರೆದ 8 ವಿದೇಶಿ ಆಟಗಾರರು | Speed news kannada

ಭಾರತದಲ್ಲಿ ಇದೇ ಮುಂದಿನ ವಾರ ಮಾರ್ಚ್‌ 28 ರಿಂದ ಐಪಿಎಲ್‌ ಶುರುವಾಗುತ್ತಿದ್ದು, ಬಿಸಿಸಿಐ ಕೂಡ ಇದಕ್ಕೆ ಸಕಕ ಸಿದ್ದತೆ ಮಾಡಿಕೊಂಡಿದೆ. ಇನ್ನು ಐಪಿಎಲ್‌ಗೆ  ಟಕ್ಕರ್‌ ಕೊಡಲು ಪಾಕಿಸ್ತಾನದಲ್ಲಿ ಪಾಕಿಸ್ತಾನ್‌ ಸೂಪರ್‌ ಲೀಗ್‌ ಆರಂಭವಾಗುತ್ತಿದೆ. ಅದು ಕೂಡ ಐಪಿಎಲ್‌ ಆರಂಭವಾಗುವ ಎರಡು ದಿನ ಮೊದಲೇ… ಪಿಎಸ್‌ಎಲ್‌ ಮಾರ್ಚ್‌ 26 ರಿಂದ ಆರಂಭವಾಗುತ್ತಿದೆ.. ಆದರೆ ಈ ಲೀಗ್‌ ಆರಂಭಕ್ಕೂ ಮೊದಲೇ ಪಿಎಸ್‌ಎಲ್‌ಗೆ ಸಂಕಷ್ಟ ಎದುರಾಗಿದೆ,,ಅದುವೇ ವಿದೇಶಿ ಆಟಗಾರರ ಅಲಭ್ಯತೆ.

ಹೌದು ಪಿಎಸ್‌ಎಲ್‌ ಲೀಗ್‌ ಶುರುವಾಗುವ ಮುನ್ನವೇ ವಿದೇಶಿ ಆಟಗಾರರ ಅಲಭ್ಯತೆ ದೊಡ್ಡ ತಲೆನೋವಾಗಿ ಪರಿಗಣಿಸಿದೆ. ಈ ಹಿಂದೆ ಕೆಲವು ಆಟಗಾರರು ಐಪಿಎಲ್‌ನಲ್ಲಿ ಆಡುವ ಸಲುವಾಗಿ ಪಿಎಸ್‌ಎಲ್ ತೊರೆದಿದ್ದರು. ಇದೀಗ ಇನ್ನು ಕೆಲವು ಆಟಗಾರರು ನಾನಾ ಕಾರಣಗಳನ್ನು ನೀಡಿ ಲೀಗ್​ನಿಂದ ಹಿಂದೆ ಸರಿದಿದ್ದಾರೆ. ಇಲ್ಲಿಯವರೆಗೆ ಎಂಟು ವಿದೇಶಿ ಆಟಗಾರರು ಪಾಕಿಸ್ತಾನ ಸೂಪರ್ ಲೀಗ್​ನ 11 ನೇ ಸೀಸನ್​ನಿಂದ ಹೊರಬಂದಿದ್ದಾರೆ.

PSL​ಗೆ ಕೈಕೊಟ್ಟ ವಿದೇಶಿ ಆಟಗಾರರು

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಈ ಎರಡು ದೇಶಗಳು ಗಡಿ ಸಂಘರ್ಷ ನಡೆಸುತ್ತಿದೆ. ಇದಕ್ಕಾಗಿ ಅಫ್ಘಾನಿಸ್ತಾನವು ಈಗಾಗಲೇ ತನ್ನ ಆಟಗಾರರನ್ನು ಪಿಎಸ್‌ಎಲ್‌ನಲ್ಲಿ ಭಾಗವಹಿಸುವುದನ್ನು ನಿಷೇಧಿಸಿದೆ. ಭಾಗವಹಿಸುತ್ತಿದ್ದ ಇತರ ದೇಶಗಳ ಆಟಗಾರರು ಸಹ ಹಿಂದೆ ಸರಿದಿರುವುದರಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಚಿಂತೆ ಹೆಚ್ಚಿಸಿದ್ದಾರೆ. ವಿದೇಶಿ ಆಟಗಾರರು ಲೀಗ್ ಆರಂಭಕ್ಕೂ ಮುನ್ನವೇ ಹಿಂದೆ ಸರಿಯುವ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಪಿಸಿಬಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹೀಗಾಗಿ ಪಿಸಿಬಿ ಅಂತಹ ಆಟಗಾರರ ವಿರುದ್ಧ ಕಾನೂನು ಕ್ರಮದ ಬೆದರಿಕೆಯನ್ನು ಸಹ ಹಾಕುತ್ತಿದೆ. ಆದರೂ ವಿದೇಶಿ ಆಟಗಾರರು ಪಿಸಿಬಿಯ ಎಚ್ಚರಿಕೆಯನ್ನು ಧಿಕ್ಕರಿಸುತ್ತಿದ್ದಾರೆ. ಎನ್ನಲಾಗುತ್ತಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.