2026-04-24 02:53:02

Mrinal Thakur is upset with Bollywood cinema | ಬಾಲಿವುಡ್ ಸಿನಿಮಾ ವಿರುದ್ಧ ಮೃಣಾಲ್ ಠಾಕೂರ್ ಬೇಸರ | Speed news kannada

Mrinal Thakur is upset with Bollywood cinema | ಬಾಲಿವುಡ್ ಸಿನಿಮಾ ವಿರುದ್ಧ ಮೃಣಾಲ್ ಠಾಕೂರ್ ಬೇಸರ | Speed news kannada

ಪ್ಯಾನ್‌ ಇಂಡಿಯಾ ನಟಿ ಮೃಣಾಲ್‌ ಠಾಕೂರ್‌  ಅವರು ಬಾಲಿವುಡ್‌ ಸಿನಿಮಾ ತಂಡ ನಂಬಿಕೆ ದ್ರೋಹ ಮಾಡಿದ್ಧಾರೆ  ಎಂದು ಬೇಸರ ವ್ಯಕ್ತಪಡಿಸದ್ದಾರೆ. ಹಿಂದಿ ಮತ್ತು ದಕ್ಷಿಣ ಸಿನಿಮಾಗಳಲ್ಲಿ ನಟಿಸುತ್ತಿದ್ದ ಮೃಣಾಲ್‌ ಠಾಕೂರ್‌  ಅಜಯ್‌ ದೇವಗನ್‌ ನಟನೆಯ  ‘ಸನ್ ಆಫ್ ಸರ್ದಾರ್ 2’ ಸಿನಿಮಾನಲ್ಲಿ ತಮಗಾದ ಕಹಿ ಅನುಭವದ ಕುರಿತು ಮಾತನಾಡಿದ್ದಾರೆ.

‘ಸನ್ ಆಫ್ ಸರ್ದಾರ್ 2’ ಸಿನಿಮಾನಲ್ಲಿ ಮೃಣಾಲ್ ಠಾಕೂರ್ ಅವರು ರಾಬಿಯಾ ಅಖ್ತರ್ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಅವರ ಪತಿಯ ಪಾತ್ರದಲ್ಲಿ ಹಿರಿಯ ನಟ ಚಂಕಿ ಪಾಂಡೆ ಡ್ಯಾನಿಶ್ ಪಾತ್ರದಲ್ಲಿ ನಟಿಸಿದ್ದಾರೆ. ಮೃಣಾಲ್ ಪ್ರಕಾರ, ಚಿತ್ರಕ್ಕೆ ಸಹಿ ಮಾಡುವಾಗ ಅಥವಾ ಚಿತ್ರೀಕರಣದ ಆರಂಭದಲ್ಲಿ ತಮ್ಮ ಪತಿಯ ಪಾತ್ರದಲ್ಲಿ ಇಷ್ಟು ಹಿರಿಯ ನಟ ನಟಿಸುತ್ತಾರೆ ಎಂಬುದು ಅವರಿಗೆ ತಿಳಿದಿರಲಿಲ್ಲವಂತೆ. ಅವರಿಗೆ ಈ ಬಗ್ಗೆ ಹೇಳಿರಲಿಲ್ಲವಂತೆ. ಇತ್ತೀಚೆಗೆ ಸಂದರ್ಶನದಲ್ಲಿ ಮಾತನಾಡುತ್ತಾ ಅವರು, ‘ಒಬ್ಬ ಹಿರಿಯ ನಟ ನನ್ನ ಪತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬುದು ನನಗೆ ಮೊದಲೇ ತಿಳಿದಿರಲಿಲ್ಲ. ಈ ಒಂದು ನಿರ್ಧಾರ ನನ್ನ ಪಾತ್ರದ ಗತಿಯನ್ನೇ ಬದಲಿಸಿತು. ಇದು ನಾನು ನಿರೀಕ್ಷಿಸಿದ್ದಲ್ಲ, ಇದರಿಂದಾಗಿ ಚಿತ್ರತಂಡದ ಮೇಲಿದ್ದ ನನ್ನ ನಂಬಿಕೆ ಅಲುಗಾಡಿತು’ ಎಂದು ಹೇಳಿದ್ದಾರೆ. ಆದರೂ, ಇದು ನನಗೆ ಒಂದು ರೀತಿಯ ಪಾಠವಾಗಿತ್ತು, ಈ ಬಗ್ಗೆ ತನಗೆ ಯಾವುದೇ ವಿಷಾದವಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.