2026-04-24 01:41:18

Mother in law murdered for obstructing daughter in laws illicit relationship | ಸೊಸೆ ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಅತ್ತೆಯ ಕೊ*ಲೆ | Speed News Kannada

Mother in law murdered for obstructing daughter in laws illicit relationship | ಸೊಸೆ ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಅತ್ತೆಯ ಕೊ*ಲೆ | Speed News Kannada

ಉತ್ತರಪ್ರದೇಶ : ಲಕ್ಷದ ನಿಶಾತ್‌ ಗಂಜ್‌ ನಲ್ಲಿ ಸೊಸೆ ಮತ್ತು ಆಕೆಯ ಪ್ರಿಯಕರ ಸೇರಿ ವೃದ್ದೆಯನ್ನು ಹತ್ಯೆಗೈದ ಘಟನೆ ಬೆಳಕಿಗೆ ಬಂದಿದೆ. ನಿರ್ಮಲಾ ದೇವಿ (69) ಕೊಲೆಯಾದ ದುರ್ದೈವಿ. ಮನೆಯ ಮೊದಲ ಮಹಡಿಯಲ್ಲಿ ವಾಸವಿದ್ದ ಬಾಡಿಗೆದಾರ ರಾಜನ್ ಹಾಗೂ ಸೊಸೆ ರಂಜನಾ ನಡುವೆ ಅನೈತಿಕ ಸಂಬಂಧವಿತ್ತು. ಮನೆಯ ಯಜಮಾನ ಮನೆಯಲ್ಲಿಲ್ಲದ ವೇಳೆ ಇವರಿಬ್ಬರು ಏಕಾಂತದಲ್ಲಿ ಭೇಟಿಯಾಗುತ್ತಿದ್ದರು. ಇದನ್ನು ಅತ್ತೆ ತೀವ್ರವಾಗಿ ವಿರೋಧಿಸಿದ್ದೇ ಅವರ ಪ್ರಾಣಕ್ಕೆ ಕಂಟಕವಾಗಿದೆ.ಕಳೆದ ಶನಿವಾರ ಆರೋಪಿಗಳಿಬ್ಬರು ಸೇರಿ ನಿರ್ಮಲಾ ಅವರ ಕೈಗಳನ್ನು ಕಟ್ಟಿ, ಸೀರೆಯಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಕೃತ್ಯದ ನಂತರ ದಾರಿ ತಪ್ಪಿಸಲು ಮೃತದೇಹದ ಮೇಲಿದ್ದ ಒಡವೆಗಳನ್ನು ಕದ್ದು ಬಚ್ಚಿಟ್ಟಿದ್ದರು. ಈ ಮಧ್ಯೆ ಮನೆಯಲ್ಲಿದ್ದ ಮೊಮ್ಮಗ ಆದಿತ್ಯ ಅಜ್ಜಿಯ ಸ್ಥಿತಿಯನ್ನು ಕಂಡು ತಂದೆಗೆ ವಿಷಯ ತಿಳಿಸಿದ್ದಾನೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಶ್ವಾನದಳದ ನೆರವಿನಿಂದ ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ. ಆರಂಭದಲ್ಲಿ ನಾಟಕವಾಡಿದರೂ, ತೀವ್ರ ವಿಚಾರಣೆಯ ನಂತರ ಹಂತಕರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಸದ್ಯ ಇಬ್ಬರೂ ಆರೋಪಿಗಳು ಪೊಲೀಸ್ ವಶದಲ್ಲಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.