ತುಮಕೂರು : ತುಮಕೂರಿನ (Tumakuru) ಶಿರಾ ತಾಲೂಕಲ್ಲಿ ಕಾಣೆಯಾಗಿದ್ದ ಪುಟ್ಟ ಮಗು ಇದೀಗ ಬೆಂಗಳೂರಲ್ಲಿ (Bengaluru ) ಪತ್ತೆಯಾಗಿದೆ.
ಫೆ 1 ರಂದು ಹುಣ್ಣಿಮೆಯ ಜಾತ್ರೆಯಲ್ಲಿ ಕಾಣೆಯಾಗಿದ್ದ ಮಗುವನ್ನು ಬೆಂಗಳೂರಿನಲ್ಲಿ ರಕ್ಷಣೆ ಮಾಡಲಾಗಿದೆ.
ಬೆಂಗಳೂರಿನ ಲಗ್ಗೆರೆಯ ನಿವಾಸಿಗಳಾದ ಪುಟ್ಟರಂಗಯ್ಯ ಲಕ್ಷ್ಮಮ್ಮ ದಂಪತಿಯ ಎರಡೂವರೆ ವರ್ಷದ ಮಗು ಶಿರಾ ತಾಲ್ಲೂಕಿನ ಮಾಗೋಡು ರಂಗನಾಥ ಜಾತ್ರಾ ಮಹೋತ್ಸವದಲ್ಲಿ ಎರಡೂವರೆ ವರ್ಷದ ಮಗು ಕಾಣೆಯಾಗಿತ್ತು.
ತಾತನ ಜೊತೆ ವ್ಯಾಪಾರ ಮಾಡಲು ಬಂದಾಗ ಕಿಡ್ನಾಪ್ ಮಾಡ್ಲಾಗಿತ್ತು. ಇದೀಗ ಮಗು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ
ಬೆಂಗಳೂರಿನ ಕೊರಮಂಗಲದ ಮಹಿಳೆ ಮನೆಯಲ್ಲಿ ಮಗು ಪತ್ತೆಯಾಗಿದೆ. ಗಂಡು ಮಗು ಬೇಕು ಎಂಬ ಹಂಬಲದಲ್ಲಿ ಮಗು ಕಿಡ್ನಾಪ್ ಮಾಡಿದ್ದ ಮಹಿಳೆ ಸಿಕ್ಕಿಬಿದ್ದಿದ್ದಾಳೆ.ಬೆಂಗಳೂರಿನ ಕೊರಮಂಗಲದ ಶಾಂತಮೇರಿ ಎಂಬಾಕೆ ಯಿಂದ ಕೃತ್ಯ ನಡೆದಿದೆ..
ಎರಡು ಹೆಣ್ಣು ಮಕ್ಕಳಿದ್ದರೂ ಗಂಡು ಮಗು ಬೇಕೆ ಬೇಕೆಂಬ ಹುಚ್ಚಾಟದಲ್ಲಿ ಶಾಂತಮೇರಿ ಕೃತ್ಯವೆಸಗಿದ್ದಾಳೆ.ಶಿರಾದ ತನ್ನ ಸಂಬಂಧಿ ನರಸಯ್ಯ ಜೊತೆಗೂಡಿ ಮಗುವನ್ನು ಕಿಡ್ನಾಪ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಚಾಕ್ಲೀಟ್ ಕೊಡೊದಾಗಿ ಮಗು ಕರೆದು ಕಿಡ್ನಾಪ್ ಮಾಡಿದ್ದ ಆರೋಪಿಗಳು ನಂತರ ಎಸ್ಕೆಪ್ ಆಗಿದ್ದರು. ನಂತರ ಪೋಷಕರು ದೂರು ದಾಖಲಿದ್ದರು. ಸದ್ಯ ಪ್ರಕರಣ ಸಂಬಂಧ ಇಬ್ಬರನ್ನ ಬಂಧಿಸಿದ ಶಿರಾ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಕೊರಮಂಗಲದಲ್ಲಿ ಮಗು ರಕ್ಷಿಸಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ.