ತುಮಕೂರು: ನಗರದ ಮೆಳೇಕೋಟೆ ಬಳಿ ಮಂಗಳವಾರ ಮೊಹ್ಮದ್ ಮುಬಾರಕ್ ಪಾಷ (29) ಎಂಬುವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.
ಕೊಲೆಯಾದ ಪಾಷ ನಗರದ ನಜರಾಬಾದ್ ನಿವಾಸಿ. ಕೊಲೆ ಆರೋಪಿ ಮೆಳೆಕೋಟೆಯ ಇಬ್ರಾಹಿಂ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. 'ಕೊಲೆಯಲ್ಲಿ ಮತ್ತೊಬ್ಬ ಆರೋಪಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಇದ್ದು, ತನಿಖೆ ನಡೆಸಲಾಗುತ್ತಿದೆ' ಎಂದು ಪೊಲೀಸ್ ಮೂಲಗಳು ತಿಳಿಸಿವೆ.
'ಇಬ್ರಾಹಿಂ ವಿರುದ್ಧ ಮುಬಾರಕ್ ಪಾಷ ವಾಮಾಚಾರ ಮಾಡಿಸಿದ್ದರು. ಇದೇ ಕಾರಣದಿಂದ ಕೋಪಗೊಂಡ ಇಬ್ರಾಹಿಂ ತನ್ನ ಸ್ನೇಹಿತನ ಜತೆ ಸೇರಿ ಮುಬಾರಕ್ ಮೇಲೆ ಹಲ್ಲೆ ನಡೆಸಿ, ಕೊಲೆ ಮಾಡಿದ್ದಾರೆ. ಹಣಕಾಸಿನ ವಿಚಾರಕ್ಕೂ ಹತ್ಯೆ ನಡೆದಿರುವ ಸಂಶಯ ವ್ಯಕ್ತವಾಗಿದೆ' ಎಂದೂ ಮೂಲಗಳು ಹೇಳಿವೆ.
ತಿಲಕ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.