2026-04-23 09:36:41

Maharashtra DCM Ajit Pawar plane crash was no accident, it was a systematic murder | ಮಹಾರಾಷ್ಟ್ರ DCM ಅಜಿತ್ ಪವಾರ್ ವಿಮಾನ ಪತನ ಆಕಸ್ಮಿಕವಲ್ಲ, ಇದೊಂದು ವ್ಯವಸ್ಥಿತ ಕೊಲೆ | Speed news kannada

Maharashtra DCM Ajit Pawar plane crash was no accident, it was a systematic murder | ಮಹಾರಾಷ್ಟ್ರ DCM ಅಜಿತ್ ಪವಾರ್ ವಿಮಾನ ಪತನ ಆಕಸ್ಮಿಕವಲ್ಲ, ಇದೊಂದು ವ್ಯವಸ್ಥಿತ ಕೊಲೆ | Speed news kannada

ಜನವರಿ 28, 2026ರಂದು ಮುಂಬೈನಿಂದ ಬಾರಾಮತಿಗೆ ತೆರಳುತ್ತಿದ್ದ ವಿಮಾನ ಪತನವಾಗಿತ್ತು. ಬಾಂಬಾರ್ಡಿಯರ್ ಲಿಯರ್‌ಜೆಟ್ 45 ಪತನಗೊಂಡ ವಿಮಾನ. ಇನ್ನೂ ಇದರಲ್ಲಿ ಮಹಾರಾಷ್ಟ್ರ ಡಿಸಿಎಂ ಸೇರಿ 5 ಜನರು ಮೃತಪಟ್ಟಿದ್ರು. ಇದು ಮಹಾರಾಷ್ಟ್ರ ಜನತೆಗೆ ನೋವೂಂಟು ಮಾಡಿತ್ತು. ಆದ್ರೆ ಇದೀಗ ಈ ಪ್ರಕರಣಕ್ಕೆ ಬೀಗ್‌ ಟ್ವೀಸ್ಟ್‌ ಸಿಕ್ಕಿದೆ. ಇದು ಕೇವಲ ಅಪಘಾತವಲ್ಲ, ಇದೊಂದು ವ್ಯವಸ್ಥಿತ ಸಂಚು ಮತ್ತು ಕೊಲೆ ಎಂದು ಅಜಿತ್‌ ಪವಾರ್‌ ಅಳಿಯ ರೋಹಿತ್ ಪವಾರ್ ಗಂಭೀರ ಆರೋಪ ಮಾಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿಅಜಿತ್‌ ಪವಾರ್‌ ಅಳಿಯ ರೋಹಿತ್‌ ಪವಾರ್‌  ದೂರು ದಾಖಲಿಸಿದ್ದಾರೆ. ವಿಮಾನ 5,000 ಗಂಟೆಗಳ ಎಂಜಿನ್ ಮಿತಿಯನ್ನು ಹೊಂದಿತ್ತು. ಆದರೂ  ಅದನ್ನು ಹಾರಾಟಕ್ಕೆ ಬಳಸಲಾಗಿದೆ. ದಾಖಲೆಗಳಲ್ಲಿ ವಿಮಾನದ ಹಾರಾಟ ಗಂಟೆಗಳನ್ನು ಕಡಿಮೆ ತೋರಿಸಲಾಗಿದ್ದು, ಅದರೆ ಅದು  8,000 ಗಂಟೆಗಳಿಗೂ ಹೆಚ್ಚು ಹಾರಾಟ ನಡೆಸಿರಬಹುದೆಂಬ ಅನುಮಾನ ವ್ಯಕ್ತವಾಗಿದೆ.   ಎಂದು ತಿಳಿಸಿದ್ದಾರೆ. ಇದೇ ವೇಳೆ, ವಿಮಾನದ ಪೈಲಟ್ ಸುಮಿತ್ ಕಪೂರ್ ಈ ಹಿಂದೆ ಎರಡು ಬಾರಿ ಮದ್ಯಪಾನ ಮಾಡಿ ಸಿಕ್ಕಿಬಿದ್ದಿದ್ದು, ಇವರನ್ನ ಅಮಾನತು ಮಾಡಲಾಗಿತ್ತು. ಆದರೂ ಅದೇ ಪೈಲಟ್‌ರನ್ನ ನೇಮಿಸಲಾಗಿದೆ. ಇನ್ನೂ ಇಷ್ಟೆಲ್ಲಾ ಸಮಸ್ಯೆ ಇದ್ದರು ಈ ಪೈಲೆಟ್‌ನನ್ನು  ಉಪಮುಖ್ಯಮಂತ್ರಿಗಳ ವಿಮಾನಕ್ಕೆ ಪೈಲಟ್ ಆಗಿ ನೇಮಿಸಿದ್ದು ಯಾಕೆ ಎಂಬ ಅನುಮಾನಗಳು  ವ್ಯಕ್ತಪಡಿಸಿದ್ದು. ಘಟನೆ ಬೆಂಗಳೂರಿನಲ್ಲಿ ನಡೆಯದಿದ್ದರೂ 'ಝಿರೋ ಎಫ್ಐಆರ್' ಮೂಲಕ ದೂರನ್ನು ಸ್ವಿಕರಿಸಿ, ಪ್ರಕರಣವನ್ನು ಸಂಬಂಧಪಟ್ಟ ವ್ಯಾಪ್ತಿಯ ಪೊಲೀಸ್ ಠಾಣೆಗೆ ವರ್ಗಾಯಿಸಲಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.