2026-04-24 12:29:09

Lenskart style guide controversy, accusations of religious discrimination | ಲೆನ್ಸ್‌ಕಾರ್ಟ್ ಸ್ಟೈಲ್‌ಗೈಡ್ ವಿವಾದ: ಧಾರ್ಮಿಕ ತಾರತಮ್ಯದ ಆರೋಪ | Speed news kannada

Lenskart style guide controversy, accusations of religious discrimination | ಲೆನ್ಸ್‌ಕಾರ್ಟ್ ಸ್ಟೈಲ್‌ಗೈಡ್ ವಿವಾದ: ಧಾರ್ಮಿಕ ತಾರತಮ್ಯದ ಆರೋಪ	| Speed news kannada

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್  ಕಂಪನಿಯಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಮತಾಂತರ ಆರೋಪಗಳ ವಿವಾದ ಮುಂದುವರಿದಿರುವ ನಡುವೆಯೇ, ಇದೀಗ Lenskart ಹೊಸ ವಿವಾದದ ಕೇಂದ್ರಬಿಂದುವಾಗಿದೆ.ಲೆನ್ಸ್ಕಾರ್ಟ್ ಉದ್ಯೋಗಿಗಳಿಗಾಗಿ ಹೊರಡಿಸಿದ್ದ ಸ್ಟೈಲ್‌ಗೈಡ್‌ನ ಕೆಲ ನಿಯಮಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ. ವಿಶೇಷವಾಗಿ ಧಾರ್ಮಿಕ ಚಿಹ್ನೆಗಳ ಬಳಕೆಯಲ್ಲಿ ಭೇದಭಾವವಿದೆ ಎಂಬ ಆರೋಪ ಕೇಳಿಬಂದಿದೆ.

ಸ್ಟೈಲ್‌ಗೈಡ್ ಪ್ರಕಾರ, ಸಿಖ್ ಪೇಟ ಮತ್ತು ಹಿಜಾಬ್ ಧರಿಸಲು ಅನುಮತಿ ನೀಡಲಾಗಿದ್ದು, ಆದರೆ ಕುಂಕುಮ, ತಿಲಕ ಅಥವಾ ಹಣೆಬೊಟ್ಟು ಹಾಕುವುದಕ್ಕೆ ಅವಕಾಶ ಇಲ್ಲ ಎಂಬ ಅಂಶ ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನು ವಿರೋಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.ಇದಕ್ಕೆ ಪ್ರತಿಕ್ರಿಯೆ ನೀಡಿರುವ ಲೆನ್ಸ್ಕಾರ್ಟ್ ಸಂಸ್ಥಾಪಕ ಪಿಯುಸ್ ಬನ್ಸಾಲ್ ವೈರಲ್ ಆಗಿರುವ ಡಾಕ್ಯುಮೆಂಟ್ ಹಳೆಯದು ಅಥವಾ ತಪ್ಪಾಗಿದೆ ಎಂದು ಹೇಳಿದ್ದಾರೆ. “ಇದು ನಮ್ಮ ಇತ್ತೀಚಿನ ಮಾರ್ಗಸೂಚಿಗಳನ್ನು ಪ್ರತಿಬಿಂಬಿಸುವುದಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಆದರೆ, ಈ ಸ್ಪಷ್ಟನೆಗೂ ಬಳಕೆದಾರರಿಂದ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. 2026ರ ಫೆಬ್ರುವರಿಯದ್ದೇ ಈ ಡಾಕ್ಯುಮೆಂಟ್ ಎಂದು ಹೇಳಲಾಗುತ್ತಿದ್ದು, ಹೊಸ ಮಾರ್ಗಸೂಚಿ ಇದ್ದರೆ ಅದನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲು ಒತ್ತಾಯಗಳು ಕೇಳಿಬರುತ್ತಿವೆ.ಒಟ್ಟಿನಲ್ಲಿ, ಈ ವಿಚಾರ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಕಂಪನಿಯ ನೀತಿಗಳ ಕುರಿತು ಪ್ರಶ್ನೆಗಳು ಎದ್ದಿವೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.