2026-03-07 07:17:31

Ladydon of Lawrence Bishtoy gang arrested | ಹಗಲಲ್ಲಿ ಬ್ಯೂಟಿ ಪಾರ್ಲರ್ ರಾತ್ರಿ ಡ್ರಗ್ಸ್ ಬಿಸಿನೆಸ್ ಲಾರೆನ್ಸ್ ಬಿಷ್ಟೋಯ್ ಗ್ಯಾಂಗ್ ನ ಲೇಡಿಡಾನ್ ಅರೆಸ್ಟ್ | Speed News Kannada

Ladydon of Lawrence Bishtoy gang arrested | ಹಗಲಲ್ಲಿ ಬ್ಯೂಟಿ ಪಾರ್ಲರ್ ರಾತ್ರಿ ಡ್ರಗ್ಸ್ ಬಿಸಿನೆಸ್ ಲಾರೆನ್ಸ್ ಬಿಷ್ಟೋಯ್ ಗ್ಯಾಂಗ್ ನ ಲೇಡಿಡಾನ್ ಅರೆಸ್ಟ್ | Speed News Kannada

ದೆಹಲಿ: ಖ್ಯಾತ ಲಾರೆನ್ಸ್ ಬಿಷ್ಟೋಯ್ ಗ್ಯಾಂಗ್ ಪರವಾಗಿ ಡ್ರಗ್ಸ್ ಸಿಂಡಿಕೇಟ್ ನಿರ್ವಹಿಸುತ್ತಿದ್ದ ಲೇಡಿ ಡಾನ್ ನೇಹಾಳನ್ನು ಪೊಲೀಸರು ಬಂಧಿಸಿದ್ದಾರೆ. ದೆಹಲಿ ಪೊಲೀಸ್ ವಿಶೇಷ ದಳದಿಂದ ಬಂಧಿಸಲ್ಪಟ್ಟ ನೇಹಾಳನ್ನು ಖುಸು ಮಾ ಅನ್ಸಾರಿ ಎಂದು ಕರೆಯಲಾಗುತ್ತದೆ.
ಇವರಿಬ್ಬರ ಜೊತೆಗೆ, ಬಾಬಿ ಕಬೂತರ್‌ನ ಇಬ್ಬರು ಸಹಚರರಾದ ಮೊಹಮ್ಮದ್ ರಾಜಿ ಖಾನ್ ಮತ್ತು ಶಹಬಾಜ್ ಅವರನ್ನು ಸಹ ಬಂಧಿಸಲಾಗಿದೆ.
ಪೊಲೀಸರ ಪ್ರಕಾರ, ಬಾಬಿ ಕಬೂತರ್ ಗಾಯಕ ಸಿಧು ಮೂಸೆವಾಲಾ ಹತ್ಯೆಗೂ ಮುನ್ನ ಆತನ ಚಲನವಲನಗಳ ಮಾಹಿತಿಯನ್ನು ಗ್ಯಾಂಗ್‌ಸ್ಟರ್‌ಗೆ ಕೊಟ್ಟಿದ್ದ. ಪ್ರಬಾಲಿವುಡ್ ನಟಿ ದಿಶಾ ಪಟಾನಿ ಅವರ ಮನೆಯ ಮೇಲಿನ ದಾಳಿಗೆ ಶಸ್ತ್ರಾಸ್ತ್ರಗಳ ಪೂರೈಕೆಯಲ್ಲೂ ಆತನ ಕೈವಾಡವಿತ್ತು.
ಖುಸುಮಾ ಅನ್ಸಾರಿ ಅಲಿಯಾಸ್ ನೇಹಾ ಅವರನ್ನು ಮಾದಕವಸ್ತು ಕಳ್ಳಸಾಗಣೆ ಮತ್ತು ಗ್ಯಾಂಗ್‌ನ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಬಂಧಿಸಲಾಗಿದೆ.ಅವರಿಂದ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ನೇಹಾ ಈಶಾನ್ಯ ದೆಹಲಿಯಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಳು. ದೆಹಲಿಯ ಸೀಲಾಂಪುರ ಪ್ರದೇಶದಲ್ಲಿ ನಡೆದ ಡಬಲ್ ಮರ್ಡರ್ ಮತ್ತು ಗ್ರೇಟರ್ ಕೈಲಾಶ್‌ನ ಜಿಮ್‌ ನ ಹೊರಗೆ ನಾದಿರ್ ಷಾ ಹತ್ಯೆಯಲ್ಲೂ ಬಾಬಿ ಕಬೂರ್ತ ಆರೋಪಿಯಾಗಿದ್ದ.
ದೆಹಲಿಯ ಈಶಾನ್ಯ ಪ್ರದೇಶದ ಪ್ರಮುಖ ಗ್ಯಾಂಗ್‌ಸ್ಟರ್ ಹಾಶಿಮ್ ಬಾಬಾ ಮತ್ತು ಲಾರೆನ್ಸ್ ಬಿಷ್ಟೋಯ್‌ಗಾಗಿಯೂ ಅವರು ಕೆಲಸ ಮಾಡುತ್ತಿದ್ದರು.
ಉತ್ತರ ಪ್ರದೇಶದ ಬರೇಲಿಯಲ್ಲಿರುವ ಬಾಲಿವುಡ್ ನಟಿ ದಿಶಾ ಪಟಾನಿ ಮನೆಯ ಮೇಲೆ ಗುಂಡು ಹಾರಿಸಿದ ಶೂಟರ್‌ಗಳಿಗೆ ಬಾಬಿ ಕಬೂತರ್ ಶಸ್ತ್ರಾಸ್ತ್ರಗಳನ್ನು ಒದಗಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಬಳಸಲಾದ ಆಯುಧಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗಿದೆ. ಕಬೂತರ್ ಸುಮಾರು ಒಂದು ದಶಕದಿಂದ ದೆಹಲಿ ಪೊಲೀಸರ ವಾಂಟೆಡ್ ಪಟ್ಟಿಯಲ್ಲಿದ್ದ. ಹಲವಾರು ದಾಳಿಗಳ ಹೊರತಾಗಿಯೂ ಆತ ಬಂಧನದಿಂದ ತಪ್ಪಿಸಿಕೊಂಡಿದ್ದ. ಲಾರೆನ್ಸ್ ಬಿಷ್ಟೋಯ್ ಮತ್ತು ಹಾಶಿಮ್ ಬಾಬಾ ಗ್ಯಾಂಗ್‌ಗಳೊಂದಿಗೆ ಸಂಬಂಧ ಹೊಂದಿದ್ದ ಇವರು, ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.