ಬೆಂಗಳೂರು: ʼಕೆಜಿಎಫ್' ಚಾಚಾ ಹರೀಶ್ ರಾಯ್ ಮೂರು ತಿಂಗಳ ಹಿಂದೆಯಷ್ಟೇ ಅಗಲಿದ್ದಾರೆ. ಕನ್ನಡದ ಬಹುತೇಕ ಎಲ್ಲಾ ಸೂಪರ್‌ಸ್ಟಾರ್‌ಗಳ ಸಿನಿಮಾಗಳಲ್ಲಿ ಹರೀಶ್ ರಾಯ್ ನಟಿಸಿ ಗಮನ ಸೆಳೆದಿದ್ದರು. ಖಳನಾಯಕನಾಗಿ ಗುರುತಿಸಿಕೊಂಡಿದ್ದ ಇವರಿಗೆ ಯಶ್ ನಟಿಸಿದ ಕೆಜಿಎಫ್ ಸಿನಿಮಾದಿಂದ ಒಳ್ಳೆಯ ಹೆಸರು ಬಂದಿತ್ತು. ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಸದ್ದು ಮಾಡಿದ್ದರು. ಇಲ್ಲಿಂದ ಇವರ ವೃತ್ತಿ ಬದುಕಿನ ಹೊಸ ಅಧ್ಯಾಯ ಶುರುವಾಗಬಹುದೆಂದು ಆಸೆ ಪಟ್ಟಿದ್ದರು. ಆದರೆ, ಅಷ್ಟರಲ್ಲೇ ಅವರ ಜೀವನದಲ್ಲಿ ವಿಧಿ ಆಟ ಆಡಿತ್ತು.
ಹರೀಶ್ ರೈ ಅಗಲಿದ ಬಳಿಕ ಅವರ ಕುಟುಂಬ ಏನು ಮಾಡುತ್ತಿದೆ. ಅವರ ಆರ್ಥಿಕ ಪರಿಸ್ಥಿತಿ ಹೇಗಿದೆ? ಎಂದು ಅವರ ಪುತ್ರ ರೋಷನ್ ರಾಯ್ ಹೇಳಿಕೊಂಡಿದ್ದಾರೆ. ಅಪ್ಪ ಹೋದ್ಮೇಲೆ ನಾವು ಮೂವರೂ ದಿಕ್ಕುಪಾಲು ಆಗಿದ್ದೀವಿ. ಆಕ್ಟರ್ ಯಶ್ ಮಾಮ ದರ್ಶನ್ ಮಾಮ ನಮ್ಮ ತಂದೆಯ ಫೇವರೆಟ್ ನಟರು. ಯಶ್ ಅವರನ್ನ ಸಂಪರ್ಕ ಮಾಡುವುದಕ್ಕೆ ನನ್ನ ತಂದೆ ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
ನಮ್ಮ ತಂದೆ ಸಂಪರ್ಕಿಸಲು ಪ್ರಯತ್ನ ಪಟ್ಟಾಗ ಯಶ್ ಅವರು ಬ್ಯುಸಿ ಇದ್ದಾರೆ ಎಂದು ಅವರ ಪಿಎ ಫೋನ್ ಮಾಡಿ ನಮ್ಮನ್ನು ವಿಚಾರಿಸಿದರು. ನಮ್ಮ ತಂದೆ ಯಶ್ ಕಾರಿನಲ್ಲಿ ಕೂರಿಸಿಕೊಂಡು ನನಗೆ ಬುದ್ಧಿ ಮಾತು ಹೇಳಿದ್ರು. ನಿಮ್ಮ ಕಾಲ ಮೇಲೆ ನೀವೆ ನಿಂತು ಸಾಧನೆ ಮಾಡಬೇಕು, ಜೀವನದಲ್ಲಿ ಮುಂದೆ ಬನ್ನಿ. ಏನಾದರೂ ಇದ್ದರೆ, ನಾನು ನಿಮ್ಮ ಜತೆ ಇರುತ್ತೇನೆ ಎಂದು ಬೆಂಬಲ ಕೊಟ್ಟಿದ್ದಾರೆ. ದುಡ್ಡಿನ ವಿಚಾರವನ್ನೆಲ್ಲ ನನ್ನ ಹತ್ತಿರ ಮಾತಾಡಿಲ್ಲ." ಎಂದು ರೋಷನ್ ಯಶ್ ಕಾರಿನ ಒಳಗೆ ನಡೆದಿದ್ದನ್ನು ರಿವೀಲ್ ಮಾಡಿದ್ದಾರೆ.