ತುಮಕೂರು : ಬಾಗಲಕೋಟೆ ಹಾಗೂ ದಾವಣಗೆರೆ ಬೈ ಎಲೆಕ್ಷನ್ ಅಖಾಡದಲ್ಲಿ ಇವತ್ತು ಬಹಿರಂಗ ಪ್ರಚಾರ ಅಂತ್ಯವಾಗುತ್ತಿದ್ದು, ಗೆಲುವಿಗಾಗಿ ಕಾಂಗ್ರೆಸ್ ಹಾಗೂ NDA ಪಕ್ಷಗಳು ತೀವು ಜಿದ್ದಾಜಿದ್ದಿನ ಹಣಾಹಣಿ ನಡೆಸುತ್ತಿವೆ ಈ ನಡುವೆ ಮಾಜಿ ಸಚಿವ ರಾಜಣ್ಣ ಅಚ್ಚರಿ ಹೇಳಿಕೆ ನೀಡಿದ್ದಾರೆ.ಕಾಂಗ್ರೆಸ್‌ಗೆ ಅದೃಶ್ಯ ಮತದಾರರಿದ್ದು ಎರಡೂ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ. ತುಮಕೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಜೊತೆಗೆ ನಿಲ್ಲುವವರು ಎಲ್ಲರೂ ಬಡವರು. ಯಾವತ್ತು ಕೂಡ ಉಪಕಾರ ಸ್ಮರಣೆ ಇಟ್ಟುಕೊಂಡವರು. ನಾವು ಗ್ಯಾರಂಟಿಗಳನ್ನು ಏನು ಆಶ್ವಾಸನೆ ಕೊಟ್ಟಿದ್ದೆವೋ ಅದನ್ನು ನಾವು ಬಹಳ ಎಫೆಕ್ಟಿವ್ ಆಗಿ ಇಂಪ್ಲಿಮೆಂಟ್ ಕೂಡ ಮಾಡಿದ್ದೇವೆ. ಈ ಹಿನ್ನೆಲೆಯಲ್ಲಿ ಎರಡು ಕಡೆನೂ ನಾವು ಗೆಲ್ಲುತ್ತೇವೆ ಎಂದರು.
ಬೈ ಎಲೆಕ್ಷನ್ ಬಳಿಕ ಕ್ಯಾಬಿನೆಟ್ ವಿಸ್ತರಣೆ ಮಾಡಬಹುದು ಮಾಡದೆ ಇರಬಹುದು. ಚುನಾವಣಾ ಫಲಿತಾಂಶಗಳು ಬಂದ ನಂತರ ವಿಸ್ತರಣೆಯಾಗಬಹುದು ಎಂದಿದ್ದಾರೆ. ನನಗೆ ಮಂತ್ರಿ ಸ್ಥಾನ ಬಂದರೆ ಬರ್ತದೆ ಹೋದರೆ ಹೋಗುತ್ತದೆ. ಅದಕ್ಕೆ ನಾವೇನು ಯೋಚನೆ ಮಾಡುವುದಿಲ್ಲ ಎಂದರು. ಪವರ್ ಇಸ್ ಪಾಯಿಸನ್ ಅಂತ ಒಂದು ಗಾದೆ ಕೇಳಿದ್ದೀನಿ. ಪಾಯಿಸನ್ ಅನ್ನು ಸರಿಯಾಗಿ ಬಳಸಿದರೆ ಔಷಧಿನೂ ಮಾಡಿಕೊಳ್ಳಬಹುದು. ಈಗ ಕ್ಯಾನ್ಸರ್ ಗೆ ಪಾಯಿಸನ್ ಇಂದಾನೆ ಔಷಧಿ ಮಾಡೋದು ಎಂದ ರಾಜಣ್ಣ, ಹಾಗಾಗಿ ಆ ಪವರ್ ಅನ್ನು ಪಾಯಿಸನ್. ಅದನ್ನು ಬಳಸುದರ ಮೇಲೆ ಅದರ ಪರಿಣಾಮ, ದುಷ್ಪರಿಣಾಮ, ಸತ್ಪರಿಣಾಮಗಳು ಗೊತ್ತಾಗುತ್ತದೆ ಎಂದು ಹೇಳಿದರು.