2026-04-23 10:58:00

Jinugo Male Romantic Album Song Released | ಜಿನುಗೋ ಮಳೆ ರೊಮ್ಯಾಂಟಿಕ್ ಆಲ್ಬಂ ಹಾಡು ಬಿಡುಗಡೆ | Speed news kannada

Jinugo Male Romantic Album Song Released | ಜಿನುಗೋ ಮಳೆ ರೊಮ್ಯಾಂಟಿಕ್ ಆಲ್ಬಂ ಹಾಡು ಬಿಡುಗಡೆ | Speed news kannada

ಯುನಿಕಾರ್ನ್ ಎಂಟರ್ ಟೈನ್ ಮೆಂಟ್ ಬ್ಯಾನರ್ ಮೂಲಕ ದೀಪ್ತಿ ಆಕಾಶ್ ಅವರು  ನಿರ್ಮಿಸಿರುವ, ಬಿಗ್ ಬಾಸ್ ಖ್ಯಾತಿಯ ಧನುಷ್ ಗೌಡ ಹಾಗೂ ಸ್ಪಂದನಾ ಸೋಮಣ್ಣ  ಅಭಿನಯದ  'ಜಿನುಗೋ ಮಳೆ' ಎಂಬ ಆಲ್ಬಂ ಸಾಂಗ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಆಕಾಶ್ ಅವರ ಕಾನ್ಸೆಪ್ಟ್ ಹಾಗೂ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಹಾಡಿನ ಬಿಡುಗಡೆಯ ನಂತರ ನಾಯಕ ಧನುಷ್ ಗೌಡ  ಮಾತನಾಡುತ್ತ ಪಿಆರ್ ಕೆ ಸಂಸ್ಥೆಯಡಿ ಕೆಲಸ ಮಾಡಬೇಕೆಂದು ನನಗೆ ಬಹಳ ದಿನಗಳಿಂದ ಆಸೆ ಇತ್ತು. ಅದು ಈ ಆಲ್ಬಂ ಹಾಡಿನ ಮೂಲಕ ನೆರವೇರಿದೆ. ಮೂಡಿಗೆರೆಯಲ್ಲಿ ೩ ದಿನಗಳ ಕಾಲ ಈ ಹಾಡನ್ನು ಶೂಟ್ ಮಾಡಿದ್ದೇವೆ‌. ಶೂಟಿಂಗ್ ಟೈಮಲ್ಲಿ ಎಲ್ಲರೂ ಫ್ಯಾಮಿಲಿ ಥರ ಸೇರಿ ಕೆಲಸ ಮಾಡಿದ್ದೇವೆ. ಇದೊಂದು ರೊಮ್ಯಾಂಟಿಕ್ ಸಾಂಗ್ ಆಗಿದ್ದು, ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದರು. ನಂತರ ನಾಯಕಿ ಸ್ಪಂದನಾ ಸೋಮಣ್ಣ ಮಾತನಾಡುತ್ತ ನಮ್ಮ ಕರೆಗೆ ಓಗೊಟ್ಟು ಬಂದ ಮಾಧ್ಯಮ ಮಿತ್ರರಿಗೆಲ್ಲ ಧನ್ಯವಾದ. ಜಿನುಗೋ ಮಳೆ ಒಂದು ರೊಮ್ಯಾಂಟಿಕ್ ಸಾಂಗ್. ನಾನು ಧನುಷ್ ಗೌಡ  ಲೀಡ್ ರೋಲ್ ಮಾಡಿದ್ದೇವೆ. ಆಕಾಶ್ ಅವರು ಈ ಹಾಡಿನ ನಿರ್ದೇಶನದ ಜತೆಗೆ ನಿರ್ಮಾಣ ಸಹ ಮಾಡಿದ್ದಾರೆ. ಅವರು ಉಪೇಂದ್ರ ಜತೆ ಕೆಲಸ ಮಾಡಿದಂಥವರು. ಒಂದೊಳ್ಳೆ ಆಡಿಯೋ ಲೇಬಲ್ ನಲ್ಲಿ ನಮ್ಮ ಹಾಡು ರಿಲೀಸಾಗಿದೆ. ನನ್ನ ಸಹೋದರ ಅವಿನಾಶ್ ಈ ಹಾಡಿಗೆ ರಾಗಸಂಯೋಜನೆ ಮಾಡಿದ್ದಾರೆ. ಸಿನಿಮಾ ಕ್ವಾಲಿಟಿಯಲ್ಲಿ ಈ ಹಾಡನ್ನು ಮಾಡಿದ್ದೇವೆ, ಎಲ್ಲರೂ ಹರಸಿ  ಎಂದರು.

ನಿರ್ದೇಶಕ ಹಾಗೂ ನಿರ್ಮಾಪಕ ಆಕಾಶ್ ಮಾತ‌ನಾಡುತ್ತ ಆರಂಭದಲ್ಲಿ ಇದೇ ಕಾನ್ಸೆಪ್ಟ್ ಇಟ್ಟುಕೊಂಡು ಶಾರ್ಟ್ ಫಿಲಂ‌ ಮಾಡಬೇಕು ಎಂದುಕೊಂಡಿದ್ದೆ. ಇದಕ್ಕೆ ನಾಗಾರ್ಜುನ ಶರ್ಮಾ ಅವರಿಂದಲೇ ಲಿರಿಕ್ ಬರೆಸಬೇಕು ಎಂದುಕೊಂಡಿದ್ದೆ. ಅವರು ಬ್ಯುಸಿ ಇದ್ದರೂ ಒಳ್ಳೆ ಲೈನ್ ಇಟ್ಟುಕೊಂಡು ಹಾಡು ರಚಿಸಿದ್ದಾರೆ. ಈ ಹಾಡಿನ ಪ್ರತಿಯೊಂದು ಸಾಲಿನಲ್ಲೂ ಅರ್ಥವಿದೆ. ರೀಲ್ಸ್ , ಡಾನ್ಸ್ ಮಾಡುವವರಿಗೆ ಒಳ್ಳೆ ಹುಕ್ ಸ್ಟೆಪ್ಟ್ ಈ ಹಾಡಲ್ಲಿದೆ. ರೀಲ್ಸ್ ಮಾಡಿದವರಿಗೆ  ಗಿಫ್ಟ್  ಕೂಡ ಇದೆ. ನಮ್ಮ ತಂಡದ ಪ್ರತಿಯೊಬ್ಬರೂ ಶೃದ್ದೆಯಿಂದ ಕೆಲಸ ಮಾಡಿದ್ದಾರೆ ಎಂದರು.‌ ನಂತರ ಸಂಗೀತ ನಿರ್ದೇಶಕ ಅವಿನಾಶ್ ಮಾತನಾಡುತ್ತ ಬೇರೆ ಭಾಷೆಗಳಲ್ಲಿ ಸಿಂಗಲ್ಸ್ ದೊಡ್ಡಮಟ್ಟದಲ್ಲಿ ಹೆಸರು ಮಾಡ್ತಿವೆ. ಇತ್ತೀಚೆಗೆ ಕನ್ನಡದಲ್ಲೂ  ಸಹ ಆ ಟ್ರೆಂಡ್ ಸೃಷ್ಟಿಯಾಗಿದೆ. ನಿರ್ದೇಶಕ ಆಕಾಶ್ ಸಿನಿಮಾ ಮಾಡುವ ಆಸಕ್ತಿ ಇಟ್ಟುಕೊಂಡು ಬಂದವರು. ಸದ್ಯದಲ್ಲೇ ಮಾಡುತ್ತಾರೆ ಎಂದು ಹೇಳಿದರು. ಉಳಿದಂತೆ ಜಿನುಗೋ ಮಳೆ ಆಲ್ಬಂ ಸಾಂಗಲ್ಲಿ ಕೆಸಲಸ ಮಾಡಿದ ಪ್ರತಿಯೊಬ್ಬರೂ ತಮ್ಮ ಅನುಭವಗಳನ್ನು  ಹಂಚಿಕೊಂಡರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.