2026-04-24 12:31:12

Japanese woman attracting tourists in Gokarna | ಮೋಹನ ಮುರುಳಿಯ ಕೊಳಲ ನಾದ, ಗೋಕರ್ಣದಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಜಪಾನ್ ಮಹಿಳೆ | Speed news kannada

Japanese woman attracting tourists in Gokarna | ಮೋಹನ ಮುರುಳಿಯ ಕೊಳಲ ನಾದ, ಗೋಕರ್ಣದಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಜಪಾನ್ ಮಹಿಳೆ | Speed news kannada

ಗೋಕರ್ಣಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಕೊಳಲಿನ ಮಧುರವಾದ ಧ್ವನಿ ಕೇಳಿಸುತ್ತದೆ. ಅದರ ಮೂಲವನ್ನು ಹುಡುಕಿ ಕೊಂಡು ಹೊರಟರೆ ಆ ಮಧುರ ಸ್ವರ ನಿಮ್ಮನ್ನು ದೇಶದ ಅತ್ಯಂತ ಹಳೆಯದೆಂದು ಪರಿಗಣಿಸಲಾದ ಮಹಾಗಣಪತಿ ದೇವಾಲಯಕ್ಕೆ ಕರೆದೊಯ್ಯುತ್ತದೆ. ಪ್ರತಿದಿನ ಬೆಳಿಗ್ಗೆ ಬಂದು, ಅದೇ ಸ್ಥಳದಲ್ಲಿ ಕುಳಿತು, ಶ್ರೀಕೃಷ್ಣನ ಸಣ್ಣ ಹಿತ್ತಾಳೆಯ ವಿಗ್ರಹವನ್ನು ಹೊರತೆಗೆದು ಕೊಳಲು ನುಡಿಸುವ ಜಪಾನ್‌ ಮಹಿಳೆಯ ಕೊಳಲು ನಾದ ಎಲ್ಲರನ್ನೂ ಆಕರ್ಶಿಸಿದೆ.

ಆಕೆ ತನ್ನ ಹೆಸರನ್ನು ಝೋಕೊ ಎಂದು ಹೇಳಿಕೊಂಡಿದ್ದು, ಗೋಕರ್ಣದ ಮಹಾಗಣಪತಿ ದೇವಾಲಯದ ಪಕ್ಕದಲ್ಲಿರುವ  ಮಹಾಬಲೇಶ್ವರ ದೇವಾಲಯದಲ್ಲಿ ಶ್ರೀ ಕೃಷ್ಣನ ವಿಗ್ರಹವಿರುವ ತಟ್ಟೆಯನ್ನು ಇಟ್ಟುಕೊಂಡು ಕೊಳಲು ನುಡಿಸುತ್ತಾಳೆ. ಆದ್ರೆ ಅವಳು ಬಿಕ್ಷೆ ಬೇಡುವುದಿಲ್ಲ ಎಂದು ದೇವಾಸ್ಥಾನದ ಅರ್ಚಕ ವಿನಾಯಕ ಶಾಸ್ತ್ರಿ ತಿಳಿಸಿದ್ದಾರೆ. ಮಹಿಳೆಯ ಸುಂದರವಾದ ಕೊಳಲು ನಾದಕ್ಕೆ ಜನರೆಲ್ಲರು ಮೂಖ ವಿಸ್ಮಿತರಾಗಿದ್ದು, ಆಕೆ ಬಳಿ ಬಂದು ಸೆಲ್ಫಿಗಳನ್ನು ತೆಗೆದುಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡುತ್ತಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.