2026-04-23 09:27:40

James Anderson sets world record by outing father and son|ತಂದೆ ಮಗನನ್ನು ಔಟ್‌, ವಿಶ್ವ ದಾಖಲೆ ಬರೆದ ಜೇಮ್ಸ್‌ ಅ್ಯಂಡರ್ಸನ್|Speed News Kannada

James Anderson sets world record by outing father and son|ತಂದೆ ಮಗನನ್ನು ಔಟ್‌, ವಿಶ್ವ ದಾಖಲೆ ಬರೆದ ಜೇಮ್ಸ್‌ ಅ್ಯಂಡರ್ಸನ್|Speed News Kannada

ಕೆಟ್ ಜಗತ್ತಿನಲ್ಲಿ ಸಚಿನ್ ತೆಂಡೂಲ್ಕರ್ ಅವರಂತಹ ದಿಗ್ಗಜ ಆಟಗಾರರು ಸುದೀರ್ಘ ಕಾಲ ಆಡಿದ್ದನ್ನು ನಾವು ನೋಡಿದ್ದೇವೆ. ಆದರೆ ಒಬ್ಬ ಬೌಲರ್‌ ಆಗಿ 2 ದಶಕಗಳಿಗೂ ಹೆಚ್ಚು ಕಾಲ ಒಂದೇ ವೇಗ ಮತ್ತು ನಿಖರತೆಯಲ್ಲಿ ಬೌಲಿಂಗ್ ಮಾಡುವುದು ಜೇಮ್ಸ್ ಅ್ಯಂಡರ್ಸನ್ ಅವರ ಶ್ರಮಕ್ಕೆ ಸಾಕ್ಷಿ. ಈ ಶ್ರಮದೊಂದಿಗೆ ಇದೀಗ ಜಿಮ್ಮಿ ವಿಶೇಷ ದಾಖಲೆಯನ್ನು ಸಹ ನಿರ್ಮಿಸಿದ್ದಾರೆ. ಹೌದು ʼಏಜ್‌ ಜಸ್ಟ್ ನಂಬರ್ʼ ಎಂಬುದನ್ನು ಇಂಗ್ಲೆಂಡ್‌ನ ದಿಗ್ಗಜ ಬೌಲರ್‌ ಅ್ಯಂಡರ್ಸನ್ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ತಮ್ಮ 43ನೇ ವಯಸ್ಸಿನಲ್ಲೂ ತಮ್ಮ ಸ್ವಿಂಗ್ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ಬೆಚ್ಚಿಬೀಳಿಸುತ್ತಿರುವ ಅ್ಯಂಡರ್ಸನ್, 2026ರ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಒಂದು ಅದ್ಭುತ ಮತ್ತು ಅಪರೂಪದ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ.  ಲಂಕಾಶೈರ್ ಪರ ಆಡುತ್ತಿರುವ ಅ್ಯಂಡರ್ಸನ್, ನಾರ್ಥಾಂಪ್ಟನ್‌ಶೈರ್ ತಂಡದ ಯುವ ಬ್ಯಾಟರ್ ಜೇಮ್ಸ್ ಸೇಲ್ಸ್‌ ಅವರನ್ನು ಔಟ್ ಮಾಡುವ ಮೂಲಕ ಇತಿಹಾಸ ಬರೆದಿದ್ದಾರೆ. ವಿಶೇಷವೆಂದರೆ, ಬರೋಬ್ಬರಿ 21 ವರ್ಷಗಳ ಹಿಂದೆ ಅಂದರೆ 2005ರಲ್ಲಿ, ಅ್ಯಂಡರ್ಸನ್ ಇದೇ ಜೇಮ್ಸ್ ಸೇಲ್ಸ್ ಅವರ ತಂದೆ ಡೇವಿಡ್ ಸೇಲ್ಸ್ ಅವರನ್ನು ಸಹ ಔಟ್ ಮಾಡಿದ್ದರು.

ಒಬ್ಬನೇ ಬೌಲರ್ ತಂದೆ ಮತ್ತು ಮಗ ಇಬ್ಬರನ್ನೂ ವೃತ್ತಿಪರ ಕ್ರಿಕೆಟ್‌ನಲ್ಲಿ ಔಟ್ ಮಾಡುವುದು ಅತ್ಯಂತ ವಿರಳ. ಜೇಮ್ಸ್ ಅ್ಯಂಡರ್ಸನ್ ಅವರ ಸುದೀರ್ಘ ವೃತ್ತಿಜೀವನ ಮತ್ತು ಫಿಟ್‌ನೆಸ್‌ಗೆ ಇದು ಹಿಡಿದ ಕನ್ನಡಿಯಾಗಿದೆ.ಇನ್ನು ಈ ಪಂದ್ಯದಲ್ಲಿ ಅ್ಯಂಡರ್ಸನ್ ಕೇವಲ ಈ ದಾಖಲೆಗೆ ಸೀಮಿತವಾಗಲಿಲ್ಲ. ಅವರು ಅಮೋಘ ಬೌಲಿಂಗ್ ಪ್ರದರ್ಶನ ನೀಡಿ 64 ರನ್‌ಗಳಿಗೆ 5 ವಿಕೆಟ್ ಪಡೆಯುವ ಮೂಲಕ ತಮ್ಮ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿಜೀವನದ 56ನೇ ‘ಫೈಫರ್’ ಪೂರ್ಣಗೊಳಿಸಿದರು.

 ಜೇಮ್ಸ್ ಅ್ಯಂಡರ್ಸನ್ ಕ್ರಿಕೆಟ್ ಇತಿಹಾಸದಲ್ಲಿ ತಂದೆ-ಮಗನನ್ನು ಔಟ್ ಮಾಡಿದ ಮೊದಲ ಬೌಲರ್ ಅಲ್ಲ. ಈ ಹಿಂದೆ ತಂದೆ ಮತ್ತು ಮಗ ಇಬ್ಬರನ್ನೂ ಔಟ್ ಮಾಡಿದ ವಿಶೇಷ ದಾಖಲೆಯನ್ನು ಐವರು ಬೌಲರ್ಗಳು ನಿರ್ಮಿಸಿದ್ದಾರೆ.  ಆದರೆ, ಅ್ಯಂಡರ್ಸನ್ ಅವರ ಈ ಸಾಧನೆ ವಿಶೇಷವಾಗಿರುವುದು ಏಕೆಂದರೆ, ಅವರು 21 ವರ್ಷಗಳ ಸುದೀರ್ಘ ಅಂತರದಲ್ಲಿ ಈ ಸಾಧನೆ ಮಾಡಿದ್ದಾರೆ. ಹೆಚ್ಚಿನ ಬೌಲರ್‌ಗಳು ಒಂದೇ ದಶಕದಲ್ಲಿ ಅಥವಾ ಅಲ್ಪ ಅವಧಿಯಲ್ಲಿ ಈ ಸಾಧನೆ ಮಾಡಿದ್ದಾರೆ. ಆದರೆ ಜೇಮ್ಸ್ ಅ್ಯಂಡರ್ಸನ್ 2005ರಲ್ಲಿ ತಂದೆಯನ್ನು ಔಟ್ ಮಾಡಿ, 2026ರಲ್ಲಿ ಮಗನನ್ನು ಔಟ್ ಮಾಡಿರುವುದು ಅವರ ಅಸಾಧಾರಣ ಫಿಟ್‌ನೆಸ್ ಮತ್ತು ಸುದೀರ್ಘ ವೃತ್ತಿಜೀವನಕ್ಕೆ ಸಾಕ್ಷಿಯಾಗಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.