20,400 ಮೆಟ್ರಿಕ್ ಟನ್ ಎಲ್‌ಪಿಜಿಯನ್ನು ಹೊತ್ತ ಭಾರತದ ಹಡಗು ʻಜಗ ವಿಕ್ರಮ್’ ಯಶಸ್ವಿಯಾಗಿ ಗುಜರಾತ್‌ನ ಕಾಂಡ್ಲಾ (Kandla) ಬಂದರಿಗೆ ಬಂದು ತಲುಪಿದೆ. ಅಮೆರಿಕ ಮತ್ತು ಇರಾನ್ ನಡುವಿನ ಇತ್ತೀಚಿನ ಕದನ ವಿರಾಮದ ಮಾತುಕತೆ ನಂತರ ಜಲಸಂಧಿಯನ್ನು ದಾಟಿ ಬಂದ ಭಾರತದ ಮೊದಲ ಹಡಗು ಇದಾಗಿದೆ. ಇರಾನ್, ಅಮೆರಿಕ ಮಧ್ಯಪ್ರಾಚ್ಯದಲ್ಲಿ ಯುದ್ಧ ಸಂಘರ್ಷದಿಂದಾಗಿ ಹೊರ್ಮುಜ್‌ನಲ್ಲಿ ಹಡಗುಗಳು ದಾಟುತ್ತಿಲ್ಲ ಜಗ ವಿಕ್ರಮ್ ಹಡಗು ಹೊರ್ಮುಜ್ ದಾಟಿದ 9ನೇ ಹಡಗಾಗಿದೆ. ಮುಂಬೈ ಮೂಲದ ಗ್ರೇಟ್ ಈಸ್ಟರ್ನ್ ಶಿಪ್ಪಿಂಗ್ ಕಂಪನಿ ಮಾಲೀಕತ್ವದ ಈ ಹಡಗು ಮಧ್ಯಮ ಗಾತ್ರದ್ದಾಗಿದೆ. ಈ ಹಡಗು 20,400 ಟನ್ ಸಾಮರ್ಥ್ಯದ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಸಾಗಾಣಿಕೆಯ ಸಾಮರ್ಥ್ಯ ಹೊಂದಿದೆ. ಈ ಹಡಗಿನಲ್ಲಿ 24 ಮಂದಿ ಭಾರತೀಯ ಸಿಬ್ಬಂದಿ ಇದ್ದರು. ಪರ್ಷಿಯನ್ ಕೊಲ್ಲಿಯಲ್ಲಿ ಇನ್ನೂ 15 ಭಾರತೀಯ ಹಡಗುಗಳು ಸಿಲುಕಿದ್ದು, ಅವುಗಳನ್ನು ಶೀಘ್ರದಲ್ಲೇ ತಾಯ್ನಾಡಿಗೆ ಕರೆತರಲು ವಿದೇಶಾಂಗ ಮತ್ತು ಹಡಗು ಸಚಿವಾಲಯ ಶ್ರಮಿಸುತ್ತಿದೆ.