ಕುವೈತ್ ನಗರ: ಕುವೈತ್ ನ ಮಿನಾ ಅಲ್-ಅಹ್ಮದಿ ತೈಲ ಸಂಸ್ಕರಣಾಗಾರದ ಮೇಲೆ ಇರಾನಿನ ಡೋನ್‌ಗಳು ಮತ್ತೆ ದಾಳಿ ನಡೆಸಿದ್ದು, ಹಲವಾರು ಘಟಕಗಳು ಬೆಂಕಿ ಹೊತ್ತಿಕೊಂಡು ಉರಿಯುತ್ತಿರುವುದಾಗಿ ತಿಳಿಸಿದೆ. ಗುರುವಾರವೂ ಸಂಸ್ಕರಣಾಗಾರದ ಮೇಲೆ ದಾಳಿ ನಡೆದಿದ್ದು, ಬೆಂಕಿ ಕಾಣಿಸಿಕೊಂಡಿದೆ.
ಮಿನಾ ಅಲ್-ಅಹ್ಮದಿ ದಿನಕ್ಕೆ ಸುಮಾರು 7,30,000 ಬ್ಯಾರೆಲ್ ತೈಲವನ್ನು ಸಂಸ್ಕರಿಸಬಲ್ಲ ಸಾಮರ್ಥ್ಯ ಹೊಂದಿದೆ. ಇದು ಪರ್ಷಿಯನ್ ಕೊಲ್ಲಿಯ ಸಣ್ಣ, ತೈಲ-ಸಮೃದ್ದ ರಾಷ್ಟ್ರವಾದ ಕುವೈತ್‌ನಲ್ಲಿರುವ ಮೂರು ತೈಲ ಸಂಸ್ಕರಣಾಗಾರಗಳಲ್ಲಿ ಒಂದಾಗಿದೆ.
ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ದಳದವರು ಪ್ರಯತ್ನಿಸುತ್ತಿದ್ದು, ದಾಳಿಯಿಂದ ಸಂಭವಿಸಿದ ಹಾನಿಯ ಬಗ್ಗೆ ಯಾವುದೇ ಮಾಹಿತಿಯನ್ನು ಕುವೈತ್ ನೀಡಿಲ್ಲ ಎಂದು ವರದಿಯಾಗಿದೆ. ಕುವೈತ್‌ನಲ್ಲಿ ಮುಸ್ಲಿಮರ ಪವಿತ್ರ ಉಪವಾಸದ ತಿಂಗಳಾದ ರಂಜಾನ್ ಮುಕ್ತಾಯದ ಆಚರಣೆಯಾದ ಈದ್ ಅಲ್-ಫಿತರ್ ಆಚರಣೆಯ ವೇಳೆ ಇರಾನ್ ಈ ದಾಳಿ ನಡೆಸಿರುವುದಾಗಿ ವರದಿ ತಿಳಿಸಿದೆ. ಇರಾನ್ ದಾಳಿಯ ಪರಿಣಾಮ ತೈಲ ಘಟಕಗಳನ್ನು ಸ್ಥಗಿತಗೊಳಿಸಿರುವುದಾಗಿ ಕುವೈತ್ ಪೆಟ್ರೋಲಿಯಂ ಕಾರ್ಪೊರೇಷನ್ ತಿಳಿಸಿದೆ. ಯುದ್ಧ ಮುಂದುವರೆದಿರುವುದರಿಂದ ಕುವೈತ್ ತನ್ನ ತೈಲವನ್ನು ರಫ್ತು ಮಾಡಲು ಸಾಧ್ಯವಾಗುತ್ತಿಲ್ಲ ಏಕೆಂದರೆ ಅದು ಪರ್ಷಿಯನ್ ಕೊಲ್ಲಿ ಮತ್ತು ಹಾರ್ಮುಜ್ ಜಲಸಂಧಿಯನ್ನು ಅವಲಂಬಿಸಿರುವುದು ಇದಕ್ಕೆ ಕಾರಣ ಎಂದು ತಿಳಿಸಿದೆ.