2026-04-23 11:01:44

IPL controversy brought premature end to career - Vin Pietersen|ಐಪಿಎಲ್ ವಿವಾದ ವೃತ್ತಿಜೀವನ ಅಕಾಲಿಕ ಅಂತ್ಯ -ವಿನ್ ಪೀಟರ್ಸನ್|Speed News Kannada

IPL controversy brought premature end to career - Vin Pietersen|ಐಪಿಎಲ್ ವಿವಾದ ವೃತ್ತಿಜೀವನ ಅಕಾಲಿಕ ಅಂತ್ಯ -ವಿನ್ ಪೀಟರ್ಸನ್|Speed News Kannada

ಕ್ರಿಕೆಟ್ ಜಗತ್ತಿನ ವಿವಾದಿತ ನಾಯಕ ಎಂದೇ ಹೆಸರಾದ ಇಂಗ್ಲೆಂಡ್‌ನ ಮಾಜಿ ಬ್ಯಾಟರ್ ಕೆವಿನ್ ಪೀಟರ್ಸನ್, ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನ ಅಂತ್ಯಗೊಂಡ ವಿಚಾರವಾಗಿ ಸ್ಫೋಟಕ ಮಾಹಿತಿಯೊಂದನ್ನ ಹೊರಹಾಕಿದ್ದಾರೆ. ಐಪಿಎಲ್‌ನಲ್ಲಿ ಭಾಗವಹಿಸಿದ್ದಕ್ಕಾಗಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ನನ್ನ ವೃತ್ತಿಜೀವನವನ್ನೇ ಹಾಳುಮಾಡಿತು ಎಂದು ಪೀಟರ್ಸನ್ ದೂರಿದ್ದಾರೆ.

ಯೂಟ್ಯೂಬರ್ ರಣವೀರ್ ಅಲ್ಹಾಬಾದಿಯಾ ಅವರ ಸಂದರ್ಶನದಲ್ಲಿ ಮಾತನಾಡಿದ ಪೀಟರ್ಸನ್, "ಐಪಿಎಲ್ ಆರಂಭಿಕ ದಿನಗಳಲ್ಲಿ ನಾನು ಲೀಗ್‌ಗೆ ಆದ್ಯತೆ ನೀಡಿದ್ದಕ್ಕೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ  ನನ್ನ ವಿರುದ್ಧ ಮಾಧ್ಯಮಗಳನ್ನು ಬಳಸಿ ಅಪಪ್ರಚಾರ ನಡೆಸಿತು. ನಾನು ಇಂಗ್ಲೆಂಡ್ ಪರ 150ಕ್ಕೂ ಹೆಚ್ಚು ಟೆಸ್ಟ್ ಆಡಿ 13 ಸಾವಿರ ರನ್ ಗಳಿಸಬೇಕಿತ್ತು. ಆದರೆ 33ನೇ ವಯಸ್ಸಿನಲ್ಲೇ ನನ್ನ ವೃತ್ತಿಜೀವನ ಮುಗಿಯುವಂತೆ ಮಾಡಲಾಯಿತು" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ನಾನು ಮಾಡಿದ ಹೋರಾಟ ಮತ್ತು ತ್ಯಾಗದಿಂದಾಗಿ ಇಂದು ಇಂಗ್ಲೆಂಡ್ ಆಟಗಾರರು ಮುಕ್ತವಾಗಿ ಐಪಿಎಲ್ ಆಡುತ್ತಿದ್ದಾರೆ. ಇತ್ತೀಚೆಗೆ ಜೋಸ್ ಬಟ್ಲರ್ ಕೂಡ ನನಗೆ ಧನ್ಯವಾದ ತಿಳಿಸಿದ್ದಾರೆ" ಎಂದು ಪೀಟರ್ಸನ್ ಹೇಳಿದ್ದಾರೆ. 2009ರಲ್ಲಿ RCB ಸೇರುವ ಮೂಲಕ ಇಂಗ್ಲೆಂಡ್ ಮಂಡಳಿಯ ಕೆಂಗಣ್ಣಿಗೆ ಗುರಿಯಾಗಿದ್ದ ಪೀಟರ್ಸನ್, ಅಂದು ಅನುಭವಿಸಿದ ಮಾನಸಿಕ ಕಿರುಕುಳದ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದಾರೆ.8,181 ಟೆಸ್ಟ್ ರನ್ ಹಾಗೂ 23 ಶತಕಗಳ ದಾಖಲೆ ಹೊಂದಿರುವ ಪೀಟರ್ಸನ್, ಸದ್ಯ 2025ರ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೆಂಟರ್ ಆಗಿ ನೇಮಕಗೊಂಡಿದ್ದು, ಮತ್ತೆ ಐಪಿಎಲ್ ಅಖಾಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.