ಇರಾನ್ ಸೇನೆಯು ಅಮೆರಿಕದ ಯುದ್ಧ ವಿಮಾನವನ್ನು ಹೊಡೆದುರುಳಿಸಿತ್ತು. ಈ ಘಟನೆಯಲ್ಲಿ ಮಿಲಿಟರಿ ವಿಮಾನದ ಪೈಲಟ್ ನಾಪತ್ತೆಯಾಗಿದ್ದರು. ಒಂದೆಡೆ ಅಮೆರಿಕ ಮತ್ತೊಂದೆಡೆ ಇರಾನ್ ಎರಡೂ ಕಡೆಯವರು ಪೈಲಟ್ಗಾಗಿ ಹುಡುಕಾಡುತ್ತಿದ್ದರು. ಆದರೆ ಅಮೆರಿಕವು ತನ್ನ ಪೈಲಟ್ ಅನ್ನು ರಕ್ಷಿಸುವಲ್ಲಿ ವಿಫಲವಾಗಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಮೆರಿಕ ಇರಾನ್ ಮೇಲೆ 13,000 ಕ್ಕೂ ಹೆಚ್ಚು ದಾಳಿಗಳನ್ನು ನಡೆಸಿದೆ, ಇದರಲ್ಲಿ ವಿಮಾನ ಅಪಘಾತಕ್ಕೀಡಾಗಿದ್ದು ಇದೇ ಮೊದಲು. ಅಮೆರಿಕದ ಸೈನಿಕರು ಈಗ ಇರಾನ್ ಒಳಗೆ ಪ್ರವೇಶಿಸಿ ಪೈಲಟ್ನನ್ನು ವಾಪಸ್ ಕರೆತಂದಿದ್ದಾರೆ.ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಇರಾನಿನ ಪಡೆಗಳೊಂದಿಗೆ ಭಾರೀ ಗುಂಡಿನ ಚಕಮಕಿ ನಡೆದಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಹೇಳಿರುವುದಾಗಿ ಕತಾರ್ ಮಾಧ್ಯಮ ಸಂಸ್ಥೆ ಅಲ್-ಜಜೀರಾ ವರದಿ ಮಾಡಿದೆ.