2026-04-24 01:57:25

hit the ship which enters hormuz; iran Speed News Kannada

hit the ship which enters hormuz; iran  Speed News Kannada

ಟೆಹ್ರಾನ್: ಇಸ್ರೇಲ್ ಮತ್ತು ಅಮೆರಿಕ ವಿರುದ್ಧದ ಯುದ್ಧದ ಭಾಗವಾಗಿಇಂದು ಗಲ್ಫ್‌ನಲ್ಲಿ ತೈಲ ಟ್ಯಾಂಕರ್ ಮೇಲೆ ದಾಳಿ ನಡೆಸಿರುವುದಾಗಿ ಇರಾನ್ ರೆವಲ್ಯೂಷನರಿ ಗಾರ್ಡ್ಸ್(ಐಆರ್‌ಜಿಸಿ) ಪ್ರತಿಪಾದಿಸಿದೆ.

ಇಂದು ಮುಂಜಾನೆ ಪ್ರೈಮಾ  ಕಂಪನಿಯ ಹಡಗಿನ ಮೇಲೆ ಸ್ಫೋಟಕ ಹೊಂದಿದ್ದ ಡ್ರೋನ್‌ನಿಂದ ದಾಳಿ ನಡೆಸಲಾಗಿದೆ. ಹೊರ್ಮುಜ್ ಜಲಸಂಧಿಯಲ್ಲಿ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ ಎಂಬ ಐಆರ್‌ಜಿಸಿ ನೌಕಾಪಡೆಯ ಎಚ್ಚರಿಕೆಯನ್ನು ಉಲ್ಲಂಘಿಸಿ ಟ್ಯಾಂಕರ್ ಜಲಸಂಧಿಗೆ ಪ್ರವೇಶಿಸಿತ್ತು ಎಂದು ಐಆರ್‌ಜಿಸಿ ತಿಳಿಸಿದೆ. ಈ ಟ್ಯಾಂಕರ್, ಮಾಲ್ಟಾ ದೇಶದ ಧ್ವಜ ಹೊಂದಿದ್ದು, ತೈಲ ಮತ್ತು ಕೆಮಿಕಲ್ ಸಾಗಣೆ ಟ್ಯಾಂಕರ್ ಎಂದು ತಿಳಿದುಬಂದಿದೆ.

ಇರಾನ್ ಹಿಡಿತದಲ್ಲಿ ಹೊರ್ಮುಜ್ ಜಲಸಂಧಿ:

ಅಮೆರಿಕ ಮಿಲಿಟರಿ ದಾಳಿ ಆರಂಭಿಸಿದಾಗಿನಿಂದ ಹೊರ್ಮುಜ್ ಜಲಸಂಧಿ ನಮ್ಮ ಹಿಡಿತದಲ್ಲಿದೆ. ಹೊರ್ಮುಜ್ ಜಲಸಂಧಿ ಮೂಲಕ ಸಂಚರಿಸುವ ತೈಲ ಟ್ಯಾಂಕರ್ ಮತ್ತು ವಾಣಿಜ್ಯ ಹಡಗುಗಳಿಗೆ ಈ ಮಾರ್ಗದಲ್ಲಿ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಐಆರ್‌ಜಿಸಿ ಹೇಳಿದೆ. ಹೊರ್ಮುಜ್ ಜಲಸಂಧಿಯು ಇರಾನ್ ಮತ್ತು ಒಮಾನ್ ದೇಶಗಳ ನಡುವಿನ 55 ಕಿ.ಮೀ ಅಗಲದ ಜಲಸಂಧಿಯಾಗಿದ್ದು, ಪರ್ಷಿಯನ್ ಕೊಲ್ಲಿಯನ್ನು ಅರೇಬಿಯನ್ ಸಮುದ್ರದಿಂದ ಬೇರ್ಪಡಿಸುತ್ತದೆ. ಇಂಧನ ವಲಯದ ದೃಷ್ಟಿಯಿಂದ ಇದು ಜಾಗತಿಕ ರಿಯಲ್ ಎಸ್ಟೇಟ್‌ನ ಒಂದು ಪ್ರಮುಖ ಭಾಗವಾಗಿದೆ. ವಿಶ್ವದ ಅತ್ಯಂತ ಚಟುವಟಿಕೆ ಇರುವ ಮತ್ತು ಕಾರ್ಯತಂತ್ರದ ಮಹತ್ವದ ಹಡಗು ಮಾರ್ಗಗಳಲ್ಲಿ ಒಂದಾಗಿದೆ.

ಈ ಜಲಸಂಧಿಯ ಮುಚ್ಚುವಿಕೆಯು ಈ ಪ್ರದೇಶದಿಂದ ತೈಲ ಮತ್ತು ಅನಿಲ ಸಾಗಣೆಗೆ ತೊಡಕು ಉಂಟಾಗಿದೆ. ಜಗತ್ತಿನಾದ್ಯಂತ ತೈಲ ಮಾರುಕಟ್ಟೆ ಅಸ್ತವ್ಯಸ್ತಗೊಳಿಸಿದೆ. ಪ್ರತಿದಿನ ಸುಮಾರು 13 ಮಿಲಿಯನ್ ಬ್ಯಾರೆಲ್ ತೈಲವನ್ನು ಈ ಮಾರ್ಗದ ಮೂಲಕ ಸರಬರಾಜು ಮಾಡಲಾಗುತ್ತದೆ. ಇದು ಜಾಗತಿಕ ತೈಲ ಸಾಗಣೆಯ ಸುಮಾರು ಶೇ. 31ರಷ್ಟಿದೆ.

 

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.