ಬೆಂಗಳೂರಿನ ಜೆಡಿಎಸ್ ಕಚೇರಿಯ ಅಂಬೇಡ್ಕರ್ ಕಾರ್ಯಕ್ರಮದಲ್ಲಿ ಅಚ್ಚರಿಕೆಯ ಹೇಳಿಕೆಯನ್ನು ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ಕುಮಾರಸ್ವಾಮಿಯವರು ಕುಮಾರಣ್ಣನ ಭವಿಷ್ಯ ಬಿಡಿ, ಕುಮಾರಣ್ಣನ ಭವಿಷ್ಯ ಮುಗಿದು ಹೋಗಿದೆ. ರಾಜ್ಯದ ಜನರ ಭವಿಷ್ಯಕ್ಕಾಗಿ ಕಾರ್ಯಕರ್ತರು ದುಡಿಮೆ ಮಾಡಿ ಎಂದು ಅಚ್ಚರಿಕೆಯ ಹೇಳಿಕೆ ನುಡಿದಿದ್ದಾರೆ. ಕಾರ್ಯಕರ್ತರು ಮುಂದಿನ ಸಿಎಂ ಕುಮಾರಸ್ವಾಮಿ ಆಗಲಿ ಎಂದು ಕೂಗುವ ಸಮಯ, ಸಂದರ್ಭ ಇದಲ್ಲ, ನನ್ನ ವೈಭವಿಕರಣ ಮಾಡುವುದು ಬೇಡ ಎಂದು ಪಕ್ಷದ ಕಾರ್ಯಕರ್ತರಿಗೆ ತಿಳಿಸಿದ್ದಾರೆ. ದೇವರ ದಯೆಯಿಂದ, ಎರಡು ಬಾರಿ ಈ ರಾಜ್ಯಕ್ಕೆ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಪೂರ್ಣಪ್ರಮಾಣದ ಬಹುಮತ ಇಲ್ಲದಿದ್ದರೂ ಸಾಧ್ಯವಾದಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದೇನೆ. ಸಮಾಜದ ಎಲ್ಲಾ ವರ್ಗದ ಜನರನ್ನು ಸಮಾನ ದೃಷ್ಟಿಯಲ್ಲಿ ನೋಡಿದ್ದೇನೆ. ರಾಜ್ಯಕ್ಕೆ ಒಳ್ಳೆಯದು ಆಗಬೇಕಂದ್ರೆ ಜೆಡಿಎಸ್ ಅನಿವಾರ್ಯ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಇನ್ಮುಂದೆ ವಾರದಲ್ಲಿ ಎರಡು ದಿನ ಕರ್ನಾಟಕದಲ್ಲಿ ಇರುತ್ತೇನೆ ಎಂದು ಸಹ ಅವರು ತಿಳಿಸಿದ್ದಾರೆ.