2026-04-23 10:55:11

Glory to the Feminine | Chaitra Ananth | ಗ್ಲೋರಿ ಟು ದ ಫೆಮಿನೈನ್.. ಕಲಾವಿದೆ ಚೈತ್ರ ಅನಂತ ಅವರಿಂದ ಹೆಣ್ಣು ಮಕ್ಕಳಿಗೆ ಕಿವಿಮಾತು..!| Speed News Kannada

Glory to the Feminine | Chaitra Ananth |  ಗ್ಲೋರಿ ಟು ದ ಫೆಮಿನೈನ್.. ಕಲಾವಿದೆ ಚೈತ್ರ ಅನಂತ ಅವರಿಂದ ಹೆಣ್ಣು ಮಕ್ಕಳಿಗೆ ಕಿವಿಮಾತು..!| Speed News Kannada

ಗ್ಲೋರಿ ಟು ದ ಫೆಮಿನೈನ್... ಸಾಮಾಜಿಕವಾಗಿ ಎಲ್ಲ ಕ್ಷೇತ್ರಗಳಲ್ಲಿಯೂ  ಸ್ತ್ರೀಯರು  ಮುಂದಾಳತ್ವ ವಹಿಸಬೇಕು ನಮ್ಮ ತನವನ್ನು ನಾವೇ ಅಭಿವ್ಯಕ್ತಿಗೊಳಿಸಬೇಕು ತಪ್ಪನ್ನು ಒಪ್ಪಾಗಿಸಿಕೊಂಡು ಮುನ್ನಡೆಯುವುದು ಹೆಣ್ಣಿನ ಮೂಲಭೂತ ಅವಶ್ಯಕತೆಗಳಲ್ಲಿ ಒಂದು ಎಂದು ಕಲಾವಿದೆ ಚೈತ್ರ ಅನಂತ ಪ್ರತಿಪಾದಿಸಿದ್ದಾರೆ ಸಾಮಾಜಿಕ ಜಾಲತಾಣವನ್ನು ಸಮರ್ಥವಾಗಿ ಬಳಸಿಕೊಳ್ಳುವ ಬಗ್ಗೆ ಕೂಡ ಅವರು ಹೆಣ್ಣು ಮಕ್ಕಳಿಗೆ ಕಿವಿಮಾತು ಹೇಳಿದ್ದಾರೆ ಸಂಪನ್ಮೂಲ ಸಂಗ್ರಹದಲ್ಲಿಯೂ ಹೆಣ್ಣು ಮಕ್ಕಳು ಹಿಂದೆ ಬೀಳಬಾರದು ಎನ್ನುವುದು ಅವರ ಅಭಿಪ್ರಾಯವಾಗಿತ್ತು ಅಕಸ್ಮಾತ್ ಶೈಕ್ಷಣಿಕವಾಗಿ ಹಿಂದುಳಿದರು ಕಲಾತ್ಮಕವಾಗಿ ಹೆಣ್ಣು ಮಕ್ಕಳು ಮುಂದೆ ಬರಬೇಕು ಎನ್ನುವುದನ್ನು ಚೈತ್ರಾ ಅನಂತ ಪ್ರತಿಪಾದಿಸಿದರು. ಈ ಸಂವಾದ ಕಾರ್ಯಕ್ರಮದಲ್ಲಿ ಎಂಬಿಎ ವಿದ್ಯಾರ್ಥಿನಿಯರು ಹಾಗೂ ಪಿ ಜಿ ಗಳಲ್ಲಿ ವಾಸ ಮಾಡುತ್ತಿರುವ ವಿದ್ಯಾರ್ಥಿನಿಯರು ಪಾಲ್ಗೊಂಡರು.. ಎನ್ ಎಸ್ ಬಿ ಮುಖ್ಯಸ್ಥೆ 
 ಡಾ. ಅನಿತಾ ಹಾಗೂ ಲಲಿತಾ ಎಂ ಶೆಟ್ಟಿ, ರೂಬಲ್ ಸಬರ್ವಾಲ್ ಸಂವಾದದಲ್ಲಿ ಪಾಲ್ಗೊಂಡರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.