ಬೆಂಗಳೂರು ಮಹಾಜನತೆಗೆ ಶುಕ್ರವಾರ ಹಾಗೂ ಶನಿವಾರ ಮಹತ್ವದ ದಿನ ಅಂತಾನೇ ಹೇಳಬಹುದು. ಏಕೆಂದರೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ 5 ನಗರ ಪಾಲಿಕೆಗಳ 2026-27ರ ಸಾಲಿನ ಆಯವ್ಯಯ ಮಂಡನೆಯಾಗಿದೆ. ಒಟ್ಟಾರೆಯಾಗಿ ಬೆಂಗಳೂರಿಗೆ 20 ಸಾವಿರ ಕೋಟಿ ರೂ ಮೀಸಲಿಡಲಾಗಿದೆ.
ಬಿಬಿಎಂಪಿ ಇತಿಹಾಸದ ಪುಟಗಳನ್ನ ಸೇರಿದ ಬಳಿಕ ಜಿಬಿಎ ಅಡಿಯಲ್ಲಿ 5 ನಗರ ಪಾಲಿಕೆಗಳು ಅಸ್ತಿತ್ವಕ್ಕೆ ಬಂದಿವೆ. ಇದಾದ ಬಳಿಕ ಎಲ್ಲಾ ನಗರ ಪಾಲಿಕೆಗಳ ಚೊಚ್ಚಲ ಬಜೆಟ್ಗೆ ಬೆಂಗಳೂರಿಗರು ಸಾಕ್ಷಿಯಾಗಿದ್ದಾರೆ. ಶುಕ್ರವಾರ 3,889 ಕೋಟಿ ರೂಪಾಯಿಗಳ ಪೂರ್ವ ನಗರ ಪಾಲಿಕೆ ಬಜೆಟ್ ಹಾಗೂ 3,426 ಕೋಟಿ ರೂಪಾಯಿಗಳ ಕೇಂದ್ರ ನಗರ ಪಾಲಿಕೆ ಬಜೆಟ್ ಮಂಡಿಸಲಾಗಿತ್ತು. ಇಂದು ಉಳಿದ ಉತ್ತರ, ಪಶ್ಚಿಮ ಹಾಗೂ ದಕ್ಷಿಣ ನಗರ ಪಾಲಿಕೆಗಳ ಬಜೆಟ್ ಮಂಡಿಸಲಾಗಿದೆ. 5 ಪಾಲಿಕೆಗಳ ಒಟ್ಟಾರೆ ಬಜೆಟ್ ಮೌಲ್ಯ ಬರೋಬ್ಬರಿ 20,213 ಕೋಟಿ ರೂಪಾಯಿ ಆಗಿದೆ