2026-03-07 07:15:44

Eyes On Friends Wife | ಫ್ರೆಂಡ್‌ ಪತ್ನಿ ಮೇಲೆ ಕಣ್ಣು ಎಣ್ಣೆ ಕುಡಿಸಿ ಸ್ನೇಹಿತ ಮಣ್ಣು! |Speed News Kannada

Eyes On Friends Wife | ಫ್ರೆಂಡ್‌ ಪತ್ನಿ ಮೇಲೆ ಕಣ್ಣು ಎಣ್ಣೆ ಕುಡಿಸಿ ಸ್ನೇಹಿತ ಮಣ್ಣು! |Speed News Kannada

ಬಾಗಲಕೋಟೆ: ಕಾಮ ಅನ್ನೋದು ಯಾವ ಹಂತಕ್ಕೆ ತಂದು ನಿಲ್ಲಿಸಿದೆ ನೋಡಿ ಹೆಣ್ಣಿನ ಮೋಹಕ್ಕೆ ಬಿದ್ದವ್ರು, ಯಾವ ಲೆವೆಲ್‌‌ಗೆ ಬೇಕಾದ್ರೂ ಇಳಿಯೋದಕ್ಕೆ ರೆಡಿಯಾಗಿದ್ದಾರೆ. ಅದು ಸ್ನೇಹಿತನಾದ್ರೂ ಸರಿ, ಸಂಬಂಧಿಕರಾದರೂ ಸರಿ. ಹೆಣ್ಣಿನ ಆಸೆಗಾಗಿ ಹೆಣಗಳ ರಾಶಿ ಹಾಗ್ತಿದ್ದಾರೆ. ಬಾಗಲಕೋಟೆಯಲ್ಲೂ ಇಂತದ್ದೇ ಹಸಿಹಸಿ ರಕ್ತ ಚರಿತ್ರೆ ಸೃಷ್ಟಿಯಾಗಿದೆ. ಸ್ನೇಹಿತನ ಪತ್ನಿ ಮೇಲೆ ಕಣ್ಣಿಟ್ಟ ಸ್ನೇಹಿತನ ಪ್ರಾಣ ಪಕ್ಷಿಯನ್ನೇ ಹಾರಿಸಿದ್ದಾನೆ.
ಸ್ನೇಹಿತ ಹೆಂಡ್ತಿಗಾಗಿ ಸ್ನೇಹಿತನಿಗೇ ಚಟ್ಟಕಟ್ಟಿದ ಪರಮ ಪಾಪಿ. ಹೆಸರು ಸಂಜೀವ್ ಕಿಳ್ಳಿಕೇತರ ಅಂತಾ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಖಾನಾಪುರ ಎಸ್‌.ಕೆ ನಿವಾಸಿ. ಈತನ ಸ್ನೇಹಿತನೇ ಸೋಮಶೇಖರ್, ಇಬ್ಬರೂ ಕುಚಿಕು ಸ್ನೇಹಿತರು. ಆದರೆ, ಈ ಸಂಜೀವ, ತನ್ನ ಸ್ನೇಹಿತನ ಹೆಂಡ್ತಿ ಜೊತೆ ತುಂಬಾನೇ ಸಲುಗೆಯಿಂದ ಇದ್ದ. ಯಾವಾಗಲೂ ಫೋನ್‌ನಲ್ಲೇ ಬ್ಯಸಿಯಾಗಿರ್ತಿದ್ದರಿಂದ ಸಂಜೀವನ ಪಿತ್ತ ನೆತ್ತಿಗೇರಿದೆ. ಇದೆಲ್ಲ ಸರಿಯಲ್ಲ, ನನ್ನ ಹೆಂಡ್ತಿ ಸಹವಾಸಕ್ಕೆ ಬರ್ಬೇಡ ಅಂತಾ ಆವಾಜ್‌ ಹಾಕಿದ್ದ.
ಆಂಟಿ ಆಸೆಗೆ ಬಿದ್ದವ ಸ್ನೇಹಿತನ ಹೆಣ ಉರುಳಿಸೋ ಪ್ಲ್ಯಾನ್‌ ಮಾಡಿದ್ದಾನೆ. ಭಾನುವಾರ ಮಟಮಟ ಮಧ್ಯಾಹ್ನವೇ ಸೋಮಶೇಖರನನ್ನ ಎಣ್ಣೆ ಹೊಡೆಯೋದಕ್ಕೆ ಕರ್ಕೊಂಡು ಹೋಗಿದ್ದಾನೆ. ಕಂಠಪೂರ್ತಿ ಕುಡೀತಿದ್ದಂತೆ ಮಾವಿನ ತೋಟದಲ್ಲಿ ತಲೆ ಮೇಲೆ ಕಲ್ಲು ಎತ್ತಾಕಿ ರಕ್ತದ ಕೋಡಿ ಹರಿಸಿದ್ದ. ಪ್ರಕರಣದ ಹಿಂದೆ ಬಿದ್ದ ಪೊಲೀಸ್ರು ಕೊಲೆಗಾರ ಸ್ನೇಹಿತನ ಕೈಗೆ ಕೋಳ ತೊಡಿಸಿದ್ದಾರೆ. ಒಟ್ನನಲ್ಲಿ ಹೆಣ್ಣಿನ ಸಂಗಕ್ಕೆ ಬಿದ್ದವ ಜೀವಕ್ಕೆ ಜೀವ ಅಂತಿದ್ದ ಗೆಳೆಯನ್ನೇ ಕೊಂದು ಹಾಕಿದ್ದಾನೆ. ಇಂತವ್ರಿಂದಲೇ ಸ್ನೇಹ ಅನ್ನೋ ಪದಕ್ಕೂ ಕಳಂಕ ಬರುವಂತಾಗಿದೆ..

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.