2026-03-07 07:15:44

Explosion while making a Bomb on a Terrace Two Dead | ಟೆರೇಸ್ ಮೇಲೆ ಬಾಂ*ಬ್ ತಯಾರಿಕೆ ವೇಳೆ ಸ್ಫೋಟ ಇಬ್ಬರು ಸಾ*ವು | Speed News Kannada

Explosion while making a Bomb on a Terrace Two Dead | ಟೆರೇಸ್ ಮೇಲೆ ಬಾಂ*ಬ್ ತಯಾರಿಕೆ ವೇಳೆ ಸ್ಫೋಟ ಇಬ್ಬರು ಸಾ*ವು | Speed News Kannada

ಭುವನೇಶ್ವರ: ಮನೆಯ ಟೆರೇಸ್ ಮೇಲೆ ಬಾಂಬ್ ತಯಾರಿಸುತ್ತಿದ್ದ ವೇಳೆ ಸ್ಪೋಟ (Crime) ಸಂಭವಿಸಿದ್ದು, ಈ ದುರ್ಘಟನೆಯಲ್ಲಿ ತಾಯಿ ಮತ್ತು ಮಗ ಮೃತಪಟ್ಟ ಘಟನೆ ಒಡಿಶಾ ರಾಜಧಾನಿ ಭುವನೇಶ್ವರ ( Bhubaneswar) ಹೊರವಲಯದ ಸುಂದರಪಾದ ಪ್ರದೇಶದಲ್ಲಿ ನಡೆದಿದೆ.
ಘಟನೆಯು ಜನವರಿ 27ರಂದು ನಡೆದಿದ್ದು, ಇದೀಗ ಸಿಸಿಟಿವಿ ದೃಶ್ಯಗಳು (Cctv )ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ (viral) ಆಗಿವೆ.
ಸ್ಪೋಟದಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಂಪನ ಉಂಟಾಗಿದೆ. ಭಾರೀ ಸದ್ದು ಕೇಳಿ ಸ್ಥಳೀಯರು ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿಬಂದಿದ್ದಾರೆ. ಸಿಸಿಟಿವಿ ದೃಶ್ಯಗಳಲ್ಲಿ ಸ್ಫೋಟದ ಭೀಕರತೆ ಸ್ಪಷ್ಟವಾಗಿ ಗೋಚರಿಸುತ್ತದೆ.ನಾಲ್ವರು ಗಂಭೀರ ಗಾಯ, ಇಬ್ಬರು ಮೃತ್ಯು ಸ್ಫೋಟ ಸಂಭವಿಸಿದಾಗ ಮನೆಯಲ್ಲಿ ನಾಲ್ವರು ಇದ್ದರು. ಸ್ಪೋಟದಲ್ಲಿ ಎಲ್ಲರೂ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಯ ವೇಳೆ ಪ್ರಮುಖ ಆರೋಪಿ ಶಹನವಾಜ್ ಮಲಿಕ್ ಫೆಬ್ರವರಿ 4ರಂದು ಮೃತಪಟ್ಟರೆ, ಅವರ ತಾಯಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಉಳಿದ ಇಬ್ಬರ ಸ್ಥಿತಿ ಇನ್ನೂ ಗಂಭೀರವಾಗಿದೆ.
ಅಪರಾಧ ಹಿನ್ನೆಲೆ ಬಹಿರಂಗ
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಸ್ಫೋಟ ಸಂಭವಿಸಿದ ಮನೆಯಲ್ಲಿ ವಾಸಿಸುತ್ತಿದ್ದ ಶಹನವಾಜ್ ವಿರುದ್ಧ ಈಗಾಗಲೇ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ಕೊಲೆ ಯತ್ನ, ಅಕ್ರಮ ಬಂದೂಕು ಹೊಂದಿಕೆ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು ಏಳು ಪ್ರಕರಣಗಳು ಇದ್ದವು ಎಂಬ ಮಾಹಿತಿ ಲಭ್ಯವಾಗಿದೆ. ಈ ಘಟನೆ ಅಕ್ರಮ ಬಾಂಬ್ ತಯಾರಿಕೆಗೆ ಸಂಬಂಧಿಸಿದದ್ದೇ ಎಂಬ ಶಂಕೆ ವ್ಯಕ್ತವಾಗಿದೆ.
ಎನ್‌ಐಎ ಪ್ರವೇಶ, ಮಾದರಿ ಸಂಗ್ರಹ
ಸ್ಫೋಟದ ಗಂಭೀರತೆಯನ್ನು ಗಮನಿಸಿ ಎನ್‌ಐಎ ತಂಡ ಸ್ಥಳಕ್ಕೆ ಭೇಟಿ ನೀಡಿ ಮಣ್ಣು ಮತ್ತು ಅವಶೇಷಗಳ ಮಾದರಿಗಳನ್ನು ಸಂಗ್ರಹಿಸಿದೆ. ವಿಧಿವಿಜ್ಞಾನ ಪರೀಕ್ಷೆಯ ಮೂಲಕ ಬಳಸಿದ ಸ್ಪೋಟಕದ ಸ್ವರೂಪ ಹಾಗೂ ಉದ್ದೇಶವನ್ನು ಪತ್ತೆಹಚ್ಚಲು ಮುಂದಾಗಿದೆ.
ಉಳಿದ ಗಾಯಾಳುಗಳು ಚೇತರಿಸಿಕೊಂಡ ನಂತರ ಅವರನ್ನು
ವಿಚಾರಣೆಗೊಳಪಡಿಸಲಾಗುವುದು. ಈ ಪ್ರಕರಣದಲ್ಲಿ ಇನ್ನಾರಾದರೂ ಭಾಗಿಯಾಗಿದ್ದಾರೆಯೇ ಹಾಗೂ ಸ್ಫೋಟದ ಹಿಂದಿನ ಉದ್ದೇಶವೇನು ಎಂಬುದರ ಕುರಿತು ಪೊಲೀಸರು ಹಾಗೂ ತನಿಖಾ ಸಂಸ್ಥೆಗಳು ಆಳವಾದ ಪರಿಶೀಲನೆ ನಡೆಸುತ್ತಿವೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.