2026-03-07 07:11:36

Drugs worth Rs 10 crore seized two arrested | ಬೆಂಗಳೂರು 10 ಕೋಟಿ ರೂ ಮೌಲ್ಯದ ಡ್ರಗ್ಸ್‌ ಜಪ್ತಿ ಇಬ್ಬರ ಅರೆಸ್ಟ್‌ | Speed News Kannada

Drugs worth Rs 10 crore seized two arrested | ಬೆಂಗಳೂರು 10 ಕೋಟಿ ರೂ ಮೌಲ್ಯದ ಡ್ರಗ್ಸ್‌ ಜಪ್ತಿ ಇಬ್ಬರ ಅರೆಸ್ಟ್‌ | Speed News Kannada

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಡ್ರಗ್ಸ್ ದಂಧೆ ವ್ಯಾಪಕವಾಗುತ್ತಿದೆ. ಪ್ರತಿದಿನ ಒಂದಿಲ್ಲೊಂದು ಮಾದಕ ವಸ್ತು ಪತ್ತೆ ಪ್ರಕರಣ ವರದಿಯಾಗುತ್ತಲೇ ಇದೆ. ಸಿಸಿಬಿ ಪೊಲೀಸರು ಇಂದು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ 10 ಕೋಟಿ ರೂ. ಮೌಲ್ಯದ ಡ್ರಗ್ಸ್‌ ಜಪ್ತಿ ಮಾಡಿ, ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ಅಶ್ವಿನ್ (27), ಮೊಬಿನಾ (25) ಬಂಧಿತ ಆರೋಪಿಗಳು.
ಆರೋಪಿಗಳು ಬಾಗಲೂರಿನ ಪ್ರೆಸ್ಟೀಜ್‌ ಫೈನ್‌ ಬೇಕರಿ ಪಾರ್ಕ್‌ನ ಫ್ಲಾಟ್‌ವೊಂದರಲ್ಲಿ ವಾಸಿಸುತ್ತಿದ್ದು, ಅಲ್ಲಿಂದ 10 ಕೋಟಿ ರೂ. ಮೌಲ್ಯದ ಡ್ರಗ್ಸ್‌ (LSD, ಹೈಡ್ರೋ ಗಾಂಜಾ, ಚರಸ್) ಅನ್ನು ವಶಪಡಿಸಿಕೊಳ್ಳಲಾಗಿದೆ. 
ಇವರಿಗೆ ಥೈಲ್ಯಾಂಡ್‌ ಮೂಲದ ವಿನ್ಸೆಂಟ್‌ ಡ್ರಗ್ಸ್‌ ಪೂರೈಕೆ ಮಾಡುತ್ತಿದ್ದ. ವಿನ್ಸೆಂಟ್‌ ಸೂಚಿಸುತ್ತಿದ್ದ ಸ್ಥಳಕ್ಕೆ ಅಶ್ವಿನ್‌ ಮತ್ತು ಮೊಬಿನಾ ಡ್ರಗ್ಸ್‌ ಸರಬರಾಜು ಮಾಡುತ್ತಿದ್ದರು. 
ಈ ಕಾರ್ಯಾಚರಣೆಯ ಮತ್ತೊಂದು ವಿಶೇಷ ಎಂದರೆ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ  8,335 LSD ಸ್ಟ್ರಿಪ್ಸ್ ಪತ್ತೆಯಾಗಿದೆ. ಒಂದು ಎಲ್‌ಎಸ್‌ಡಿ ಸ್ಟ್ರಿಪ್‌ 6,000 ರೂ. ಬೆಲೆ ಬಾಳುತ್ತದೆ. ಪೆಡ್ಲರ್‌ಗಳು ದೇವರ ಚಿತ್ರಗಳು ಮತ್ತು ಕಲಾಕೃತಿಗಳನ್ನು ಬಳಸಿ ಡ್ರಗ್ಸ್‌ ಮಾರಾಟ ಮಾಡುತ್ತಿದ್ದರು.  LSD ಸ್ಟ್ರಿಪ್‌ಗಳ ಜತೆಗೆ 534 ಗ್ರಾಂ ಚರಸ್, 5 ಕೆಜಿ ಹೈಡ್ರೋ ಗಾಂಜಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಫ್ಲಾಟ್‌ ಮಾಲೀಕರ ಪಾತ್ರ ಕುರಿತೂ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.