ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸಿನಿಮಾ ಪ್ರೀತಿ ಬೇರೆ ಲೆವೆಲ್‌ಗೇನೆ ಇದೆ. ಕನ್ನಡದ ಹಲವು ಕಲಾವಿದರನ್ನು ಮಿಮಿಕ್ರಿ ಮಾಡೋವಷ್ಟು ಆಸಕ್ತಿನೂ ಇದೆ. ಆದರೆ, ಬಾಲ್ಯದಿಂದಲೂ ರಿಷಬ್ ಶೆಟ್ರು ಒಬ್ಬ ನಟಿಯ ಅಪ್ಪಟ ಅಭಿಮಾನಿ ಆಗಿದ್ದಾರೆ. ತಮ್ಮ ಚಿತ್ರ ಜೀವನ ಶುರು ಮಾಡೋ ಮೊದಲು ಆ ನಟಿಯ ಚಿತ್ರಗಳನ್ನ ನೋಡಿದ್ದಾರೆ. ಅದೃಷ್ಟ ನೋಡಿ ಹೇಗಿದೆ? ಕಾಂತಾರ ಸಿನಿಮಾ (Kantara) ಬಂದ್ಮೇಲೆ ಆ ನಟಿಯನ್ನ ನೋಡುವ ಅವಕಾಶ ರಿಷಬ್ ಶೆಟ್ಟಿಗೆ ಸಿಕ್ಕೇ ಬಿಡ್ತು. ಹಾಗೆ ತಮ್ಮ ಅಭಿಮಾನವನ್ನು ರಿಷಬ್ ಶೆಟ್ರು ವೇದಿಕೆ ಮೇಲೆ ನಿಂತೇ ಹೇಳಿಕೊಂಡಿದ್ದಾರೆ. ಆ ನಟಿ ಯಾರು? ರಿಷಬ್ ಶೆಟ್ರು ತಮ್ಮ ನೆಚ್ಚಿನ ನಾಯಕಿ ಮುಂದೆ ಏನು ಹೇಳಿಕೊಂಡ್ರು ಗೋತ್ತ.
ರಿಷಬ್ ಶೆಟ್ರಿಗೆ ಕನ್ನಡದ ಕಲಾವಿದರ ಬಗ್ಗೆನೂ ಅಷ್ಟೆ ಗೌರವ ಮತ್ತು ಪ್ರೀತಿ ಇದೆ. ಆದರೆ, ಬಾಲ್ಯದಿಂದಲೂ ರಿಷಬ್ ಶೆಟ್ರು ಬಾಲಿವುಡ್‌ನ ಒಬ್ಬ ಕಲಾವಿದೆಯ ಅಪ್ಪಟ ಅಭಿಮಾನಿ ಆಗಿದ್ದರು. ಆ ನಟಿ ಯಾರು ಅನ್ನೋ ಕುತೂಹಲವೂ ಈಗಾಗಲೇ ರಿವೀಲ್ ಆಗಿದೆ. ಅದನ್ನ ಇಲ್ಲಿ ಮತ್ತೆ ವಿವರಿಸೋದಾದ್ರೆ, ಕಾಜೋಲ್ ಅಂದ್ರೆ ರಿಷಬ್ ಶೆಟ್ರಿಗೆ ತಂಬಾನೆ ಇಷ್ಟ. ಇವರ ಅತಿ ದೊಡ್ಡ ಅಭಿಮಾನಿ ಆಗಿದ್ದರು ರಿಷಬ್ ಶೆಟ್ರು. ಈ ಸಮಯದಲ್ಲಿಯೇ ರಿಷಬ್ ಶೆಟ್ರು ತಮ್ಮ ಅಭಿಮಾನದ ಕುರಿತು ಮಾತನಾಡಿದರು. ಬಾಲ್ಯದಿಂದಲೂ ತಮಗೆ ಕಾಜೋಲ್ ಅಂದ್ರೆ ತುಂಬಾನೆ ಇಷ್ಟ. ಅವರ ಅತಿ ದೊಡ್ಡ ಅಭಿಮಾನಿ ನಾನು ಅಂತ ಹೇಳಿದರು. ಈ ಒಂದು ಮಾತು ಕೇಳಿ ಕಾಜೋಲ್ ಮನಸಾರೆ ನಕ್ಕು ಬಿಟ್ಟಿದ್ದರು.
ರಿಷಬ್ ಶೆಟ್ರು ಮಿಮಿಕ್ರಿ ಕೂಡ ಚೆನ್ನಾಗಿ ಮಾಡುತ್ತಾರೆ. ಜಗ್ಗೇಶ್, ಸುಂದರ ಕೃಷ್ಣ ಅರಸ್, ರಾಜ್‌ಕುಮಾರ್ ಹೀಗೆ ಸುಮಾರು ಕಲಾವಿದರ ಧ್ವನಿಯನ್ನ ಅಷ್ಟೆ ಅಚ್ಚುಕಟ್ಟಾಗಿಯೇ ಇಮಿಟೇಟ್ ಮಾಡುತ್ತಾರೆ. ತಮ್ಮ ಈ ಒಂದು ಪ್ರತಿಭೆಯನ್ನ ಗೋಲ್ಡನ್ ಸ್ಟಾರ್ ಗಣೇಶ್ ಅವರ ಕಾರ್ಯಕ್ರಮದಲ್ಲಿ ತೋರಿದ್ದರು. ಈ ಸಮಯದಲ್ಲಿ ಪ್ರಮೋದ್ ಶೆಟ್ಟಿ, ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ, ಶೀತಲ್ ಶೆಟ್ಟಿ ಹೀಗೆ ಎಲ್ಲರೂ ಇದ್ದರು.