2026-04-24 12:20:26

Dhurandhara -2 opens the box office record of Dangal - Baahubali-2|ಧುರಂಧರ್-2 ಬಾಕ್ಸ್ ಆಫೀಸ್ ದಂಗಲ್ ಬಾಹುಬಲಿ-2 ದಾಖಲೆಗೆ ತೆರೆ|Speed News Kannada

Dhurandhara -2 opens the box office record of Dangal - Baahubali-2|ಧುರಂಧರ್-2 ಬಾಕ್ಸ್ ಆಫೀಸ್ ದಂಗಲ್ ಬಾಹುಬಲಿ-2 ದಾಖಲೆಗೆ ತೆರೆ|Speed News Kannada

ಆದಿತ್‌ ಧರ್‌ ನಿರ್ದೇಶನದ ಧುರಂಧರ್: ದಿ ರಿವೆಂಜ್ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಅಬ್ಬರ ಮುಂದುವರಿಸುತ್ತಿದ್ದು, ಪ್ರತಿದಿನ ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ. ಮಾರ್ಚ್ 19ರಂದು ವಿಶ್ವದಾದ್ಯಂತ ಬಿಡುಗಡೆಯಾದ ಈ ಸಿನಿಮಾ, ಕೇವಲ 10 ದಿನಗಳಲ್ಲಿ ಸೂಪರ್ ಹಿಟ್ ಚಿತ್ರಗಳನ್ನೇ ಹಿಂದಿಕ್ಕಿ ಭಾರೀ ಯಶಸ್ಸು ಕಂಡಿದೆ. ಭಾರತದಲ್ಲೇ ಅಲ್ಲ, ವಿದೇಶಗಳಲ್ಲಿಯೂ ಈ ಚಿತ್ರದ ಪ್ರಭಾವ ಹೆಚ್ಚುತ್ತಿದೆ. ವಿಶೇಷವಾಗಿ ಉತ್ತರ ಅಮೆರಿಕಾದಲ್ಲಿ $22 ಮಿಲಿಯನ್ ಗಳಿಸುವ ಮೂಲಕ, ಪ್ರಭಾಸ್‌ ಅಭಿನಯದ ಬಾಹುಬಲಿ-2 ಚಿತ್ರದ 9 ವರ್ಷಗಳ ಹಳೆಯ ದಾಖಲೆಯನ್ನು ಧುರಂಧರ್-2 ಮುರಿದಿದೆ. S.S.ರಾಜಮೌಳಿನಿರ್ದೇಶನದ ಬಾಹುಬಲಿ-2 $20 ಮಿಲಿಯನ್ ಗಳಿಕೆ ಮೂಲಕ ಇತಿಹಾಸ ನಿರ್ಮಿಸಿತ್ತು.

ಈ ಸಾಧನೆಗೆ ಬಾಹುಬಲಿ-2 ನಿರ್ಮಾಪಕರು ಕೂಡ ಅಭಿನಂದನೆ ತಿಳಿಸಿದ್ದಾರೆ. ಚಿತ್ರದ ನಿರ್ಮಾಪಕರಾದ ಶೋಬು ಯರ್ಲಗಡ್ಡ 9 ವರ್ಷಗಳ ದಾಖಲೆಯನ್ನು ಮುರಿದು ಹೊಸ ಮಾನದಂಡಗಳನ್ನು ನಿರ್ಮಿಸಿದ ಧುರಂಧರ್-2 ತಂಡಕ್ಕೆ ಅಭಿನಂದನೆಗಳು” ಎಂದು ಹೇಳಿದ್ದಾರೆ. ಒಟ್ಟಿನಲ್ಲಿ, ಧುರಂಧರ್-2 ಚಿತ್ರವು ಭಾರತೀಯ ಸಿನೆಮಾದ ಹೊಸ ಗಡಿ ನಿರ್ಮಿಸುತ್ತಿದ್ದು, ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ತನ್ನ ಪ್ರಭಾವವನ್ನು ಗಟ್ಟಿಯಾಗಿ ಮೂಡಿಸಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.