ಆದಿತ್ ಧರ್ ನಿರ್ದೇಶನದ ಧುರಂಧರ್: ದಿ ರಿವೆಂಜ್ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಅಬ್ಬರ ಮುಂದುವರಿಸುತ್ತಿದ್ದು, ಪ್ರತಿದಿನ ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ. ಮಾರ್ಚ್ 19ರಂದು ವಿಶ್ವದಾದ್ಯಂತ ಬಿಡುಗಡೆಯಾದ ಈ ಸಿನಿಮಾ, ಕೇವಲ 10 ದಿನಗಳಲ್ಲಿ ಸೂಪರ್ ಹಿಟ್ ಚಿತ್ರಗಳನ್ನೇ ಹಿಂದಿಕ್ಕಿ ಭಾರೀ ಯಶಸ್ಸು ಕಂಡಿದೆ. ಭಾರತದಲ್ಲೇ ಅಲ್ಲ, ವಿದೇಶಗಳಲ್ಲಿಯೂ ಈ ಚಿತ್ರದ ಪ್ರಭಾವ ಹೆಚ್ಚುತ್ತಿದೆ. ವಿಶೇಷವಾಗಿ ಉತ್ತರ ಅಮೆರಿಕಾದಲ್ಲಿ $22 ಮಿಲಿಯನ್ ಗಳಿಸುವ ಮೂಲಕ, ಪ್ರಭಾಸ್ ಅಭಿನಯದ ಬಾಹುಬಲಿ-2 ಚಿತ್ರದ 9 ವರ್ಷಗಳ ಹಳೆಯ ದಾಖಲೆಯನ್ನು ಧುರಂಧರ್-2 ಮುರಿದಿದೆ. S.S.ರಾಜಮೌಳಿನಿರ್ದೇಶನದ ಬಾಹುಬಲಿ-2 $20 ಮಿಲಿಯನ್ ಗಳಿಕೆ ಮೂಲಕ ಇತಿಹಾಸ ನಿರ್ಮಿಸಿತ್ತು.
ಈ ಸಾಧನೆಗೆ ಬಾಹುಬಲಿ-2 ನಿರ್ಮಾಪಕರು ಕೂಡ ಅಭಿನಂದನೆ ತಿಳಿಸಿದ್ದಾರೆ. ಚಿತ್ರದ ನಿರ್ಮಾಪಕರಾದ ಶೋಬು ಯರ್ಲಗಡ್ಡ 9 ವರ್ಷಗಳ ದಾಖಲೆಯನ್ನು ಮುರಿದು ಹೊಸ ಮಾನದಂಡಗಳನ್ನು ನಿರ್ಮಿಸಿದ ಧುರಂಧರ್-2 ತಂಡಕ್ಕೆ ಅಭಿನಂದನೆಗಳು” ಎಂದು ಹೇಳಿದ್ದಾರೆ. ಒಟ್ಟಿನಲ್ಲಿ, ಧುರಂಧರ್-2 ಚಿತ್ರವು ಭಾರತೀಯ ಸಿನೆಮಾದ ಹೊಸ ಗಡಿ ನಿರ್ಮಿಸುತ್ತಿದ್ದು, ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ತನ್ನ ಪ್ರಭಾವವನ್ನು ಗಟ್ಟಿಯಾಗಿ ಮೂಡಿಸಿದೆ.