2026-04-24 12:16:59

Darling Krishna Love Mocktail 3 wins|ಗೆದ್ದೇ ಬಿಡ್ತು ಡಾರ್ಲಿಂಗ್ ಕೃಷ್ಣನ ಲವ್‌ಮಾಕ್ಟೇಲ್ 3 |Speed News Kannada

Darling Krishna Love Mocktail 3 wins|ಗೆದ್ದೇ ಬಿಡ್ತು ಡಾರ್ಲಿಂಗ್ ಕೃಷ್ಣನ ಲವ್‌ಮಾಕ್ಟೇಲ್ 3 |Speed News Kannada

ಡಾರ್ಲಿಂಗ್ ಕೃಷ್ಣ ಡೈರೆಕ್ಷನ್ ಮಾಡಿರೊ ಲವ್ ಮಾಕ್ಟೇಲ್-3 ಚಿತ್ರ ಗೆದ್ದಿದೆ. ಈ ಹಿಂದಿನ ಲವ್ ಮಾಕ್ಟೇಲ್ ಎರಡೂ ಸರಣಿ ಚಿತ್ರಗಳು ಗೆದ್ದಿವೆ. ಹಾಗಾಗಿಯೆ ಡಾರ್ಲಿಂಗ್ ಕೃಷ್ಣ ಅವರನ್ನ ಈಗ ಹ್ಯಾಟ್ರಿಕ್ ಡೈರೆಕ್ಟರ್ ಅಂತ ಬಣ್ಣಿಸಬಹುದು. ಲವ್ ಮಾಕ್ಟೇಲ್-3 ಒಳ್ಳೆ ಕಲೆಕ್ಷನ್ ಮಾಡಿದೆ. ಹಾಕಿರೋ ದುಡ್ಡು ಕೂಡ ವಾಪಾಸ್ ಬಂದಿದೆ. ಮಾರ್ಚ್-19 ರಂದು ಈ ಚಿತ್ರ ರಿಲೀಸ್ ಆಗಿದೆ. ಇದೀಗ 25 ದಿನಗಳನ್ನು ಇದು ಪೂರೈಸಿದೆ. ಚಿತ್ರ ತಂಡ ಈ ಖುಷಿಯನ್ನು ಹಂಚಿಕೊಂಡಿದೆ. ಲವ್ ಮಾಕ್ಟೇಲ್ ಸರಣಿಯ ಮೂರನೇ ಚಿತ್ರ ಇದಾಗಿದೆ. ಈ ಮೂಲಕ ಮೂರನೇ ಚಿತ್ರವೂ ಗೆದ್ದಿದೆ. ಹಾಗಾಗಿಯೇ ನಾವು ಡಾರ್ಲಿಂಗ್ ಕೃಷ್ಣ ಅವರನ್ನ ಹ್ಯಾಟ್ರಿಕ್ ಡೈರೆಕ್ಟರ್ ಅಂತ ಹೇಳಬಹುದು. ಡೈರೆಕ್ಟರ್ ಡಾರ್ಲಿಂಗ್ ಕೃಷ್ಣ ಅವರ ಈ ಚಿತ್ರ ಮಾರ್ಚ್-19 ರಂದು ರಿಲೀಸ್ ಆಗಿತ್ತು. ಧುರಂದರ್-2 ಚಿತ್ರದ ಎದುರೇ ಈ ಸಿನಿಮಾ ರಿಲೀಸ್ ಆಗಿತ್ತು.

ಆದರೂ ಈ ಚಿತ್ರವನ್ನ ಜನ ನೋಡಿದರು. ಚಿತ್ರಕ್ಕೆ ಒಳ್ಳೆ ಕಲೆಕ್ಷನ್ ಕೂಡ ಆಯಿತು. ಯಶಸ್ವಿಯಾಗಿಯೇ ಈ ಚಿತ್ರ ಈಗ ೨೫ ದಿನಗಳನ್ನ ಕಂಪ್ಲೀಟ್ ಮಾಡಿದೆ. ಈ ಖುಷಿಯನ್ನ ಸಿನಿಮಾ ತಂಡವೆ ಹಂಚಿಕೊಂಡಿದೆ. ಈ ಚಿತ್ರದಲ್ಲಿ ಒಂದು ಕ್ಯಾರೆಕ್ಟರ್ ಇದೆ. ಜಗ್ಗ ಮಮ್ಮಿ ಅನ್ನುವ ಈ ಪಾತ್ರ ಎಲ್ಲರ ಹೃದಯ ಗೆದ್ದಿದೆ. ಈ ಒಂದು ಪಾತ್ರದ ಮೂಲಕ ನವ ನಟ ಜಗದೀಶ್ ಎಲ್ಲರ ಗಮನ ಸೆಳೆದಿದ್ದಾರೆ. ಇದರ ಹೊರತಾಗಿ ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ದಿಲೀಪ್ ರಾಜ್, ಶ್ವೇತಾ ಪ್ರಸಾದ್, ರಚೆಲ್ ಡೇವಿಡ್, ನಯೇರಾ, ಜಗದೀಶ್, ಅಭಿಲಾಶ್, ಗಿರಿರಾಜ್, ದಳಪತಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಶ್ರೀ ಕ್ರೇಜಿ ಮೈಂಡ್ಸ್ ಕ್ಯಾಮರಾವರ್ಕ್ ಮಾಡಿದ್ದಾರೆ. ಸಂಕಲನ ಕೂಡ ಇವರೆ ಮಾಡಿದ್ದಾರೆ. ಸಂಗೀತದ ವಿಚಾರಕ್ಕೆ ಬಂದ್ರೆ, ನಕುಲ್ ಅಭಯಂಕರ್ ಮ್ಯೂಸಿಕ್ ಮಾಡಿದ್ದಾರೆ. ಚಿತ್ರಕ್ಕೆ ಅಮರ್ ಮತ್ತು ಜೋನಾ ಕಲಾ ನಿರ್ದೇಶನ ಮಾಡಿದ್ದಾರೆ..

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.