2026-04-23 10:53:08

Countdown to the IPL match|ಐಪಿಎಲ್‌ ಪಂದ್ಯಕ್ಕೆ ಕ್ಷಣಗಣನೆ: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಕಲ ಸಿದ್ಧತೆ|Speed news kannada

Countdown to the IPL match|ಐಪಿಎಲ್‌ ಪಂದ್ಯಕ್ಕೆ ಕ್ಷಣಗಣನೆ: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಕಲ ಸಿದ್ಧತೆ|Speed news kannada

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಸಿಬಿ ಹೋಂಗ್ರೌಂಡ್‌ನಲ್ಲಿ ಪಂದ್ಯ ಆಡುವುತ್ತೋ ಇಲ್ಲೋ ಎಂಬ ಗೊಂದಲಕ್ಕೆ ಪರಿಹಾರ ಸಿಕ್ಕಿದ್ದು, ರಾಯಲ್‌ ಚಾಲೆಂಜರ್ಸ್‌ ಅಭಿಮಾನಿಗಳಿಗೆ ಬೆಂಗಲೂರಿನಲ್ಲೇ ಮ್ಯಾಚ್‌ ನೋಡುವ ಅವಕಾಶ ಸಿಕ್ಕಿದೆ. 19 ನೇ ಆವೃತ್ತಿಯ ಐಪಿಎಲ್‌ಗೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿಯ ಉದ್ಘಾಟನಾ ಪಂದ್ಯವನ್ನು ಶನಿವಾರ ನಡೆಯಲಿದ್ದು ಅಭಿಮಾನಿಗಳೆಲ್ಲಾ ಕಾತುರದಿಂದ ಕಾಯುತ್ತಿದ್ದಾರೆ. ಆರ್‌ಸಿಬಿ ತನ್ನ ಮೊದಲ ಪಂದ್ಯದಲ್ಲೇ SRH ಜೊತೆ ಆಡಲಿದ್ದು ಅಭಿಮಾನಿಗಳು ಭಾರಿ ಉತ್ಸಾಹಕರಾಗಿದ್ದಾರೆ. ಇನ್ನೂ ಆರ್‌ಸಿಬಿಯ ಪಂದ್ಯಗಳನ್ನು ಆಡುವ ಕುರಿತಾಗಿ ಪೊಲೀಸರು ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಾ ಬಿಗಿ ಬಂದೋಬಸ್ತ್‌ಗೆ ಸಿದ್ದತೆಯನ್ನು ನಡೆಸಿಕೊಳ್ಳಲಾಗಿದೆ.

ಕಾಲ್ತುಳಿತ ಕುಟುಂಬಕ್ಕೆ ಸೀಟು ಮೀಸಲು

ಇನ್ನೂ ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಸಂಬಂಧ ಪಟ್ಟಂತೆ ಘಟನೆಯಲ್ಲಿ ಸಾವನ್ನಪಪ್ಪಿದ್ದ 11 ಜನರ ಮೃತರ ಕುಟುಂಬಕ್ಕೆ ಉಚಿತ ಸೀಟು ಮೀಸಲಿಡಲಾಗಿದೆ. ಮೃತರ ಕುಟುಂಬಕ್ಕೆ ಸೀಟು ಮೀಸಲಿಡಲು KSCA & RCB ಫ್ರಾಂಚೈಸಿ ಮುಂದಾಗಿದೆ.  ಆರ್‌ಸಿಬಿ ಪ್ರತಿ ಪಂದ್ಯದಲ್ಲೂ 11 ಜನರ ಮೃತರ ಕುಟುಂಬಕ್ಕೆ ಉಚಿತ ಸೀಟು ಮೀಸಲಿಡಲಾಗಿದ್ದು, ಅವರ ಕುಟುಂಬದವರು ಬಂದು ಉಚಿತವಾಗಿ ಪಂದ್ಯವನ್ನು ವೀಕ್ಷಿಸಬಹುದಾಗಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.