ರಿಯಲ್ ಎಸ್ಟೇಟ್ ಕಂಪನಿ ಕಾನ್ಫಿಡೆಂಟ್ ಗ್ರೂಪ್ ನ ಮುಖ್ಯಸ್ಥ ಸಿಜೆ ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಕಾ ತಂಡ ತನಿಖೆ ಚುರುಕುಗೊಳಿಸಿದ್ದೆ ರಾಯ ಆತ್ಮಹತ್ಯೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಕಾರಣವೇ ಅಂತ ಒಂದ್ ಕಡೆ ಪ್ರಶ್ನೆ ಉಂಟಾಗಿದೆ ಇನ್ನೊಂದು ಕಡೆ ವೈಯಕ್ತಿಕ ಸಮಸ್ಯೆಗಳು ಹಾಗೂ ವ್ಯವಹಾರಿಕ ಕಾರಣಗಳು ಇರಬಹುದು ಅಂತ ಅನುಮಾನ ಹುಟ್ಟಿಕೊಂಡಿವೆ. ಹಾಗಾಗಿ ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಕೊಚ್ಚಿಯಿಂದ ಬಂದಿರುವ ಐ ಆರ್ ಎಸ್ ಅಧಿಕಾರಿ ಕೃಷ್ಣ ಪ್ರಸಾದ್ ನೇತೃತ್ವದ ತಂಡವು ಕಾನ್ಫಿಡೆಂಟ್ ಗ್ರೂಪಿಗೆ ಸಂಬಂಧಿಸಿದ ಎಲ್ಲಾ ಕಚೇರಿಗಳ ಮೇಲೆ ದಾಳಿ ನಡೆಸಿತ್ತು.
ಇನ್ನು ಈ ತಂಡಕ್ಕೆ ಬೆಂಗಳೂರು ಬಿಟ್ಟು ತೆಳ್ಳದಂತೆ ಸೂಚಿಸಿರುವ ಎಸ್ಐಟಿ ಅಧಿಕಾರಿಗಳು ಅಗತ್ಯವಿದ್ದರೆ ಹೇಳಿಕೆ ದಾಖಲಿಸಿಕೊಳ್ಳಲಾಗುವುದು ಅಂತ ಕೂಡ ತಿಳಿಸಿದ್ದಾರೆ ಇನ್ನು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನ್ ವಂಶಿಕೃಷ್ಣ ಹಾಗೂ ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ ಅವರ ನೇತೃತ್ವದ ವಿಶೇಷ ತಂಡ ಶನಿವಾರದಿಂದಲೇ ತನಿಖೆ ಆರಂಭಿಸಿದ್ದು ದಾಳಿಗೆ ಸಂಬಂಧಿಸಿದಂತೆ ಯಾವೆಲ್ಲಾ ವಿಷಯಗಳನ್ನು ಹಂಚಿಕೊಂಡಿದ್ದಾರೆ ಎಂದು ಸಹೋದರ ಸಿಜೆ ಬಾಬು ಮತ್ತು ಪುತ್ರ ಮೋಹನ್ ಅವರ ಹೇಳಿಕೆ ಪಡೆದುಕೊಂಡಿದ್ದಾರೆ.
ಅಷ್ಟೇ ಅಲ್ಲ ರಾಯ್ ಐಟಿ ದಾಳಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.? ಯಾವ ವಿಚಾರಗಳನ್ನು ಚರ್ಚಿಸಿದರು ಎಂಬುದು ಸೇರಿ ಹಲವು ಮಾಹಿತಿಗಳನ್ನ ಬಾಬು ಅವರಿಂದ ಎಸ್ಐಟಿ ಪಡೆದುಕೊಂಡಿದೆ ಅಂತ ಹೇಳಲಾಗುತ್ತಿದೆ ಇನ್ನು ರಾಯ್ ಅವರ ಪತ್ನಿ ಹಾಗೂ ಮಗಳನ್ನು ಕೂಡ ಸೋಮವಾರ ವಿಚಾರಣೆ ನಡೆಸಲು ಸಿದ್ಧತೆಯನ್ನು ನಡೆಸಿದೆ ಅಂತ ಮೂಲಗಳು ತಿಳಿಸಿವೆ. ಮಾಡಿಕೊಂಡ ದಿನ ಕಚೇರಿಯಲ್ಲಿ ಕಾರ್ಯನಿರ್ವಹಿಸಿದ್ದ ಕಂಪನಿಯ ನಿರ್ದೇಶಕರು ಹಣಕಾಸು ವಿಭಾಗದ ಸಿಬ್ಬಂದಿ ಆಪ್ತರ ವಿಚಾರಣೆಯನ್ನು ಕೂಡ ನಡೆಸಲಾಗುತ್ತಿದೆ ರಾಯಬರು ಒತ್ತಡದಲ್ಲಿದ್ದಾರೆ ಅವರ ವರ್ತನೆ ಯಾವ ರೀತಿ ಇತ್ತು ಗುಂಡಿನ ಶಬ್ದ ಕೇಳಲಿಲ್ಲವೇ ಎಂಬ ಪ್ರಶ್ನೆಗಳನ್ನು ಕೇಳಿ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಅಂತ ಹೇಳಲಾಗ್ತಾ ಇದೆ.