ಕರ್ನಾಟಕದಲ್ಲಿ ವಾಯು ಗುಣಮಟ್ಟ ತೀವ್ರವಾಗಿ ಕುಸಿದಿದ್ದು, ಮೈಸೂರಿನಲ್ಲಿ AQI 185 ಹಾಗೂ ಬೆಂಗಳೂರಿನಲ್ಲಿ 166 ದಾಖಲಾಗಿದೆ. ಹಲವು ನಗರಗಳಲ್ಲಿ ಗಾಳಿ ಗುಣಮಟ್ಟ ಅನಾರೋಗ್ಯಕರ ಮಟ್ಟದಲ್ಲಿದ್ದು, ತಜ್ಞರು ಎಚ್ಚರಿಕೆ ನೀಡಿದ್ದಾರೆ. ಮಂಗಳೂರು, ಉಡುಪಿ ಕಡೆ ಸ್ವಲ್ಪ ಸುಧಾರಣೆ ಕಂಡುಬಂದಿದೆ.ಬೆಂಗಳೂರಿನ ವಾಯುಗುಣಮಟ್ಟ ಇಂದು ಹದಗೆಟ್ಟ ಸ್ಥಿತಿಯಲ್ಲೇ. ಆದರೆ ಇದನ್ನೂ ಮೀರಿಸುವಂತೆ ಮೈಸೂರಿನ ಏರ್ ಕ್ವಾಲಿಟಿ ಕುಸಿದಿದ್ದು, ಆತಂಕ ಸೃಷ್ಟಿಸಿದೆ. ವಾಯು ಗುಣಮಟ್ಟ ಎಲ್ಲೆಡೆಯೂ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ ಎಂದು ತಜ್ಞರು ತಿಳಿಸಿದ್ದಾರೆ. ಉಡುಪಿ, ಮಂಗಳೂರು ಸೇರಿದಂತೆ ಇಂದು ಹಲವೆಡೆ ವಾಯು ಗುಣಮಟ್ಟ ಸುಧಾರಿಸಿದೆ.