2026-03-07 07:23:00

Complaint against conductor for abusing women | ಫ್ರೀ ಅಂತ ಊರು ಸುತ್ತುತ್ತಿದ್ದೀರಾ ಮಹಿಳೆಯರನ್ನು ನಿಂದಿಸಿದ ಕಂಡಕ್ಟರ್ ವಿರುದ್ಧ ದೂರು | Speed News Kannada

Complaint against conductor for abusing women | ಫ್ರೀ ಅಂತ ಊರು ಸುತ್ತುತ್ತಿದ್ದೀರಾ ಮಹಿಳೆಯರನ್ನು ನಿಂದಿಸಿದ ಕಂಡಕ್ಟರ್ ವಿರುದ್ಧ ದೂರು | Speed News Kannada

ಬೆಂಗಳೂರು: ಮಹಿಳೆಯರಿಗೆ ಶಕ್ತಿ ಯೋಜನೆಯಡಿ ಸರ್ಕಾರಿ ಸಾರಿಗೆ ಬಸ್‌ನಲ್ಲಿ ಉಚಿತ ಪ್ರಯಾಣ ಆರಂಭಿಸಿದ ಕಾರಣದಿಂದ ಬಸ್‌ನಲ್ಲಿ ಓಡಾಡುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಆದರೆ ಬಸ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪ್ರಯಾಣಿಕರ ಕಂಡು ಕಂಡಕ್ಟರ್ ಸಿಟ್ಟಿಗೆದ್ದು, ಫ್ರೀ ಅಂತಾ ಊರೂರು ಸುತ್ತುತ್ತೀರಾ ಎಂದು ಕಿರಿಕ್ ಮಾಡಿರುವ ಘಟನೆ ಬಿಎಂಟಿಸಿ ಬಸ್‌ನಲ್ಲಿ ನಡೆದಿದೆ. ಚನ್ನಪಟ್ಟಣದಿಂದ ಬೆಂಗಳೂರಿಗೆ ಬರುತ್ತಿದ್ದ ಬಿಎಂಟಿಸಿ ಬಸ್ ತುಂಬಾ ರಶ್ ಆಗಿತ್ತು. ಇದನ್ನು ಗಮನಿಸಿದ ಕಂಡಕ್ಟರ್ ನಿಮಗೆ ಮನೆಯಲ್ಲಿ ಮಾಡೋದಕ್ಕೆ ಕೆಲಸ ಇಲ್ವಾ? ಫ್ರೀ ಅಂತ ಊರು ಊರು ಸುತ್ತುತ್ತೀರಾ? ಎಂದು ಕಿರಿಕ್ ಮಾಡಿದ್ದಾನೆ. ಜೊತೆಗೆ ಸರ್ಕಾರ ಮತ್ತು ಮಹಿಳೆಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಶಕ್ತಿ ಯೋಜನೆಯನ್ನೂ ಕೂಡ ಟೀಕಿಸಿದ್ಧಾನೆ.
ಇನ್ನೂ ಬಸ್‌ನಲ್ಲಿದ್ದ ಓರ್ವ ಮಹಿಳೆಯನ್ನು ಕೆಂಗೇರಿ ಬಳಿಯೇ ಕೆಳಗಿಳಿಸಿ, ಅವಾಚ್ಯ ಶಬ್ದಗಳಿಂದ ಬೈಯ್ದಿದ್ದಾನೆ. ಘಟನೆ ಸಂಬಂಧ ಕೆಂಗೇರಿ ಪೊಲೀಸರಿಗೆ ಮಹಿಳೆ ದೂರು ನೀಡಿದ್ದು ದೂರಿನ ಆಧಾರದ ಮೇಲೆ ಕಂಡಕ್ಟರ್ ವಿರುದ್ಧ ಎಫ್‌ಐಆ‌ರ್ ದಾಖಲಾಗಿದೆ.ಇನ್ನು ವಾಡಿಕೆಗಿಂತ ಇಂದು ಬಿಎಂಟಿಸಿಯಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದರಿಂದ ಪುರುಷರು ಬಾಗಿಲಿನಲ್ಲಿಯೇ ನಿಂತು ಪ್ರಯಾಣಿಸುವಂತಾಗಿದೆ. ಹಣ ಕೊಟ್ಟು ನಾವು ನಿಂತುಕೊಂಡು ಹೋಗಬೇಕಾಗಿದೆ ಎಂದು ಪುರುಷ ಪ್ರಯಾಣಿಕರು ಬೇಸರ ಹೊರ ಹಾಕಿದ್ದಾರೆ. ಮಹಿಳಾ ಪ್ರಯಾಣಿಕರಿಗೆ ಪ್ರತ್ಯೇಕ ಬಸ್ ವ್ಯವಸ್ಥೆ ಮಾಡಬೇಕೆಂದು ಪುರುಷ ಪ್ರಯಾಣಿಕರು ಆಗ್ರಹಿಸಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.