2026-03-07 07:18:30

CJ Roy is not a sugar daddy?| ಸಿಜೆ ರಾಯ್ ಶುಗರ್ ಡ್ಯಾಡಿ ಅಲ್ಲ ಶಾಕಿಂಗ್ ಹೇಳಿಕೆ ಕೊಟ್ಟಿದ್ಯಾರು? | Speed News Kannada

CJ Roy is not a sugar daddy?| ಸಿಜೆ ರಾಯ್ ಶುಗರ್ ಡ್ಯಾಡಿ ಅಲ್ಲ ಶಾಕಿಂಗ್ ಹೇಳಿಕೆ ಕೊಟ್ಟಿದ್ಯಾರು? | Speed News Kannada

ಬೆಂಗಳೂರು : ಸಿ ಜೆ ರಾಯ್ ಆತ್ಮಹತ್ಯೆ ಪ್ರಕರಣ ದೇಶದಲ್ಲೇ ಭಾರೀ ಚರ್ಚೆಗೆ ದಾರಿ ಮಾಡಿದೆ. ಇದೀಗ ಸಿಜೆ ರಾಯ್ ಬಗ್ಗೆ ಚಕ್ರವರ್ತಿ ಚಂದ್ರಚೂಡ್ ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. 17 ರಾಷ್ಟ್ರಗಳಲ್ಲಿ ವ್ಯವಹಾರ ಇರುವ ವ್ಯಕ್ತಿ ಐಟಿ ರೈಡ್
ಗೆ ಹೆದರಿ ಸಾಯ್ತಾರ? ನನ್ನ ಅನುಮಾನ ಏನಂದ್ರೆ ಸಿಜೆ ರಾಯ್ ಸಾವು ಐಟಿ ರೈಡ್ ಗಿಂತ ದೊಡ್ಡದು ಎಂದು ಹೇಳಿದ್ದಾರೆ. ಸಿಜೆ ರಾಯ್ ವೀರಪ್ಪಮೋಯಿಲಿ ಅವರ ಜೊತೆ ಒಳ್ಳೆ ಒಡನಾಟ ಇದ್ದ ವ್ಯಕ್ತಿ. ಕಾಂಗ್ರೆಸ್ ಜೊತೆ ಒಳ್ಳೆ ಸಂಪರ್ಕದಲ್ಲಿದ್ದವರು ಕಾಂಗ್ರೆಸ್ ಗೆ ಫಂಡ್ ಮಾಡ್ತಿದ್ದವರು. ಕೇರಳದಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಹಣ ಕೊಟ್ಟಿದ್ದಾರೆ ಎಂದಿದ್ದಾರೆ.
ಮಹಾರಾಷ್ಟ್ರದ ಕಾಂಗ್ರೆಸ್ ಜೊತೆ ಚೆನ್ನಾಗಿದ್ದಾರೆ ಗುಜರಾತ್ ಚುನಾವಣೆಗೂ ಫಂಡ್ ಕೊಟ್ಟಿರುವ ಮಾಹಿತಿ ಇದೆ. ಸಾಕಷ್ಟು ವ್ಯವಹಾರಗಳ ಮಾಡ್ತಿದ್ದ ರಾಯ್ ಗೆ ಪೊಲಿಟಿಕಲ್ ಫಂಡಿಂಗ್ ಆಪತ್ತು ತಂದಿರುತ್ತೆ. ಸಿಜೆ ರಾಜ್ ಬೇರೆ ದೇಶದ ಸಿಟಿಜನ್ ಶಿಪ್ ಯಾಕೇ ಅಪ್ಲೈ ಮಾಡಿದ್ರು ಇದು ತನಿಖೆಯಾಗಬೇಕು ಎಂದು ಹೇಳಿದರು. ಸಿಜೆ ರಾಯ್ ಅವ್ರನ್ನ ಬ್ಲಾಕ್ ಮೇಲ್ ಮಾಡೊದಕ್ಕೆ ಶುರು ಮಾಡಿದ್ರು. 
ಇಂತದೆಲ್ಲ ಹ್ಯಾಂಡಲ್ ಮಾಡೊದು ಸಿಜೆ ರಾಯ್ ಗೆ ವೆರಿ ಈಸಿ. ಹ್ಯಾಂಡಲ್ ಮಾಡಿ ಕೈ ಬಿಟ್ರು. ಸಿಜೆ ರಾಯ್ ಅವ್ರ ಆತ್ಮಹತ್ಯೆ ಏನಿದೆ ತುಂಬಾ ಗಂಭೀರ ವಿಚಾರ. ಈ ಕಾಲದಲ್ಲಿ ಯಾರು ಯಾರಿಗೆ ಹಣ ಕೊಟ್ಟಿದ್ದೀನಿ ಅಂತ ಡೈರಿಯಲ್ಲಿ ಬರೆಯಲ್ಲ. ಈಗೆಲ್ಲ ಷೇರ್ ಅಲ್ಲಿ ಇರುತ್ತೆ ಸೆಕೆಂಡ್ ಲೈನ್ ಎಕಾನಾಮಿಕಲ್ ಅಲ್ಲಿ ಇರುತ್ತೆ ಎಂದಿದ್ದಾರೆ.ಕೇಂದ್ರ ಸರ್ಕಾರದಲ್ಲಿ ಇರುವಂತ ಉತ್ತರಭಾರತದ ರಣ ಹದ್ದಗಳು ಯಾರನ್ನ ಕುಕ್ಕಿತಿಂತಿದೆ? ಇದು ಕಾಂಗ್ರೆಸ್ ವರ್ಸಸ್ ಬಿಜೆಪಿಯ ಫಂಡ್ ಮಾಫಿಯಾ. ಇದರ ನಡುವೆ ಸಿಕ್ಕಿ ಹಾಕಿಕೊಂಡಿರೋದು ನಮ್ಮ ಸಿಜೆ ರಾಯ್ ಎಂದು ಹೇಳಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.