ಎಲ್‌ಪಿಜಿ ಗ್ಯಾಸ್ ಬದಲಾವಣೆಯಲ್ಲಿ ಬದಲಾವಣೆಯಾಗಿದೆ ಎಂದು ಗ್ಯಾಸ್ ಇನ್ನು ಸಿಗಲ್ಲ ಎಂಬ ನಿರೀಕ್ಷೆಯಲ್ಲಿ ಗ್ರಾಹಕರು ಅಧಿಕೃತವಾಗಿ ಗ್ಯಾಸ್‌ಗಳನ್ನು ಬುಕ್ ಮಾಡುತ್ತಿದ್ದರು, ಇದೀಗ ಕೇಂದ್ರ ಸರ್ಕಾರ ಗ್ಯಾಸ್ ಬುಕ್ಕಿಂಗ್ ಅವಧಿಯಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ನಗರ ಪ್ರದೇಶಕ್ಕೆ 25 ದಿನ ಹಾಗೂ ಗ್ರಾಮೀಣ ಭಾಗಕ್ಕೆ 45 ದಿನ ಇದರಲ್ಲಿ ಯಾವುದೇ ಬದಲಾವಣೆಯಿಲ್ಲ. ದಯವಿಟ್ಟು ಅಧಿಕೃತವಾಗಿ ಕಂಪನಿಗಳಿಂದ ಬರುವ ಮಾಹಿತಿಗಳ ಮೇಲೆ ಗಮನಹರಿಸಿ. ಗಾಬರಿಯಲ್ಲಿ ಗ್ಯಾಸ್ ಬುಕ್ ಮಾಡಬೇಡಿ ಎಂದು ಇಂಡಿಯನ್ ಆಯಿಲ್ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದೆ. ಎಲ್‌ಪಿಜಿ ರಿಫೀಲ್ ಬುಕ್ಕಿಂಗ್ ಅವಧಿಯಲ್ಲಿ ಬದಲಾವಣೆಗಳಾಗಿವೆ ಎಂಬ ವರದಿಗಳು ತಪ್ಪಾಗಿವೆ. ಸದ್ಯ ಜಾರಿಯಲ್ಲಿರುವ ಅವಧಿಯಲ್ಲಿ ಯಾವುದೇ ಬದಲಾವಣೆಗಳಿಲ್ಲ. ದೇಶಾದ್ಯಂತ ಎಲ್‌ಪಿಜಿ ಸರಬರಾಜಿನಲ್ಲಿಯೂ ಯಾವುದೇ ಸಮಸ್ಯೆ ಇಲ್ಲ. ಸ್ಟಾಕ್ ಇದೆ ಎಂದು ತಿಳಿಸಿದೆ.