ಕಲಬುರಗಿಯಿಂದ ರಾಯಚೂರಿನತ್ತ ಹೋಗ್ತಿದ್ದ ಕೆಕೆಆರ್‌ಟಿಸಿ ಬಸ್ ಮತ್ತು ಜೇವರ್ಗಿಯಿಂದ ಕಲಬುರಗಿ ಕಡೆ ಬರ್ತಿದ್ದ ಲಾರಿ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಇನ್ನೂ ಈ ಘಟನೆ ಕಲಬುರಗಿ ತಾಲೂಕಿನ ಹಸನಾಪುರ ಕ್ರಾಸ್ ಬಳಿ ನಡೆದಿದೆ. ಈ ವೇಳೆ ಬಸ್‌ಗೆ ಹಿಂಬದಿಯಿಂದ ವೇಗವಾಗಿ ಟಿಪ್ಪರ್ ಡಿಕ್ಕಿ ಹೊಡೆದಿದ್ದು ಬಸ್‌ನಲ್ಲಿದ್ದ ಎಂಟು ಜನ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು ಗಾಯಾಳುಗಳನ್ನ ಜೇವರ್ಗಿ ಮತ್ತು ಕಲಬುರಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ. ಕಲಬುರಗಿ ಸಂಚಾರಿ ಠಾಣೆ-1 ರಲ್ಲಿ ಪ್ರಕರಣ ದಾಖಲಾಗಿದೆ.