2026-03-07 07:21:27

Bomb Threats To Delhi Schools | ಸಂಸತ್‌ ಸೇರಿ ದೆಹಲಿಯ ಶಾಲೆಗಳಿಗೆ ಬಾಂಬ್‌ ಬೆದರಿಕೆ ದೆಹಲಿ ಖಾಲಿಸ್ತಾನ ಆಗಲಿದೆ ಎಂಬ ಸಂದೇಶ ರವಾನೆ | Speed News Kannada

Bomb Threats To Delhi Schools | ಸಂಸತ್‌ ಸೇರಿ ದೆಹಲಿಯ ಶಾಲೆಗಳಿಗೆ ಬಾಂಬ್‌ ಬೆದರಿಕೆ ದೆಹಲಿ ಖಾಲಿಸ್ತಾನ ಆಗಲಿದೆ ಎಂಬ ಸಂದೇಶ ರವಾನೆ | Speed News Kannada

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಖಲಿಸ್ತಾನಿ ಉಗ್ರರ ಅಟ್ಟಹಾಸ ಮಿತಿ ಮೀರುತ್ತಿದೆ. ಫೆಬ್ರವರಿ 13ರಂದು ಮಧ್ಯಾಹ್ನ 1.11ಕ್ಕೆ ಬಾಂಬ್‌ ಸ್ಫೋಟ ಸಂಭವಿಸಲಿದೆ ಎಂದು ಕಿಡಿಗೇಡಿಗಳು ಬೆದರಿಕೆ ಹಾಕಿದ್ದಾರೆ. ಜತೆಗೆ 9 ಶಾಲೆಗಳಿಗೆ ಬಾಂಬ್‌ ಬೆದರಿಕೆ ಕರೆ ಹಾಗೂ ಇ-ಮೇಲ್‌ ಗಳು ಬಂದಿವೆ.
ಇಮೇಲ್‌ ಮೂಲಕ ಬೆದರಿಕೆ ಕರೆಗಳು ಬಂದಿವೆ ಎಂದು ಶಿಕ್ಷಣ ಸಂಸ್ಥೆಗಳು ದೂರು ಸಲ್ಲಿಸಿವೆ. ಕೂಡಲೇ ಬಾಂಬ್‌ ನಿಷ್ಕ್ರಿಯ ದಳ ಮತ್ತು ಅಗ್ನಿಶಾಮಕ ದಳ ತಂಡಗಳು ಶಾಲೆಗಳೀಗೆ ಆಗಮಿಸಿ ತಪಾಸಣೆ ನಡೆಸಿದ್ದಾರೆ.
ದೆಹಲಿ ಖಾಲಿಸ್ತಾನ ಆಗಲಿದೆ. ಅಫ್ಜಲ್‌ ಗುರುವಿನ ನೆನಪಿಗಾಗಿ ಪಂಜಾಬ್‌  ಖಾಲಿಸ್ತಾನ ಎಂದು ಇ ಮೇಲ್‌ ನಲ್ಲಿ ಉಲ್ಲೇಖಿಸಲಾಗಿದೆ. 
ಈ ಬಾಂಬ್‌ ಬೆದರಿಕೆ ಸಂದೇಶಗಳು ಬೆಳಗ್ಗೆ ಸುಮಾರು 8:30 ರಿಂದ 9:00 ಗಂಟೆಯ  ನಡುವೆ ಬಂದಿದ್ದು, ಇಂದು ಮಧ್ಯಾಹ್ನ 1:11 ರ ಸುಮಾರಿಗೆ ಸ್ಫೋಟ ಸಂಭವಿಸಲಿದೆ ಎಂದು ಹೇಳಲಾಗಿದೆ. ಬಾಂಬ್‌ ಬೆದರಿಕೆಯಿಂದ ಶಾಲೆಗಳು, ಮಕ್ಕಳು ಸಿಬ್ಬಂದಿ ವರ್ಗ ಮತ್ತು ಪೋಷಕರು ಆತಂಕಕ್ಕೀಡಾಗಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.