2026-04-24 12:19:56

Bigg Boss Chandrika Dixit I will do anything for money | ಹಣಕ್ಕೋಸ್ಕರ ಏನ್ ಬೇಕಾದ್ರೂ ಮಾಡ್ತೀನಿ ಬಿಗ್ ಬಾಸ್ ಚಂದ್ರಿಕಾ ದೀಕ್ಷಿತ್ | Speed News Kannada

Bigg Boss Chandrika Dixit I will do anything for money | ಹಣಕ್ಕೋಸ್ಕರ ಏನ್ ಬೇಕಾದ್ರೂ ಮಾಡ್ತೀನಿ ಬಿಗ್ ಬಾಸ್ ಚಂದ್ರಿಕಾ ದೀಕ್ಷಿತ್ | Speed News Kannada

ದೆಹಲಿಯ ಪ್ರಸಿದ್ಧ ರಸ್ತೆ ಬದಿಯಲ್ಲಿ ವಡಾಪಾವ್ ಮಾರುತ್ತಿದ್ದ ಚಂದ್ರಿಕಾ ದೀಕ್ಷಿತ್, ತಮ್ಮ ಮಾತು ಮತ್ತು ವಿಡಿಯೋಗಳ ಮೂಲಕ ರಾತ್ರೋರಾತ್ರಿ ಪ್ರಸಿದ್ಧಿ ಪಡೆದಿದ್ದರು. ಇದೇ ಜನಪ್ರಿಯತೆ ಅವರನ್ನು ಸಲ್ಮಾನ್ ಖಾನ್ ನಡೆಸಿಕೊಡುವ 'ಬಿಗ್ ಬಾಸ್ ಒಟಿಟಿ' ವರೆಗೂ ಕರೆದೊಯ್ದಿತ್ತು. ಆದರೆ, ಬಿಗ್ ಬಾಸ್‌ನಿಂದ ಹೊರಬಂದ ನಂತರ ಅವರ ಪ್ರತಿ ಹೇಳಿಕೆಯೂ ಈಗ ತೀವ್ರವಾಗಿ ಟೀಕೆಗೆ ಗುರಿಯಾಗುತ್ತಿದೆ. ಚಂದ್ರಿಕಾ, ಹಣಕಾಸಿನ ಸಂಕಷ್ಟ ಮತ್ತು ಮಗುವಿನ ಪಾಲನೆಯ ಕುರಿತು ಮಾತನಾಡಿರೋದು ವಿಡಿಯೋ  ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಚಂದ್ರಿಕಾ ದೀಕ್ಷಿತ್, "ಮಗುವನ್ನು ಸಾಕಿ ಸಲಹಲು ಹಣದ ಅವಶ್ಯಕತೆಯಿದ್ದರೆ, ನಾನು ಹಣಕ್ಕಾಗಿ ದೈಹಿಕ ಸುಖ ನೀಡುವ ಹಾದಿಯನ್ನು ಬೇಕಿದ್ದರೂ ಪರಿಗಣಿಸಬಹುದು. 
ನಾನು ಯಾರ ಜೊತೆಯಲ್ಲಾದರೂ ಮಲಗಲು ಸಿದ್ಧ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಕುಟುಂಬವನ್ನು ನಡೆಸಲು ಮತ್ತು ಮಗುವನ್ನು ಬೆಳೆಸಲು ಸಾವಿರಾರು ಗೌರವಾನ್ವಿತ ಮತ್ತು ಕಾನೂನುಬದ್ಧ ದಾರಿಗಳಿವೆ. ಹಣಕ್ಕಾಗಿ ಇಂತಹ ಹಾದಿಯನ್ನು ಸಮರ್ಥಿಸಿಕೊಳ್ಳುವುದು ತಪ್ಪು ಎಂದು ನೆಟ್ಟಿಗರು ಟೀಕಿಸಿದ್ದಾರೆ. ಕಲವರು ಚಂದ್ರಿಕಾ ಅವರ ಪರವಾಗಿ ಧ್ವನಿ ಎತ್ತಿದ್ದು, "ಆಕೆ ಆ ಕ್ಷಣದ ಹತಾಶೆಯಲ್ಲಿ ಅಥವಾ ಸಂದರ್ಭದ ಒತ್ತಡದಲ್ಲಿ ಹಾಗೆ ಮಾತನಾಡಿರಬಹುದು. ಒಂದು ಸಣ್ಣ ವಿಡಿಯೋ ನೋಡಿ ವ್ಯಕ್ತಿತ್ವ ನಿರ್ಧರಿಸುವುದು ಬೇಡ" ಎಂದು ಹೇಳಿದ್ದಾರೆ. ಆದರೆ, ಬಹುತೇಕ ಜನರು ಮಾತ್ರ ಇಂತಹ ಹೇಳಿಕೆಗಳು ಸಮಾಜದ ಮೇಲೆ ತಪ್ಪು ಪ್ರಭಾವ ಬೀರುತ್ತವೆ ಎಂದು ಕಿಡಿಕಾರುತ್ತಿದ್ದಾರೆ. ಈ ವಿವಾದವು ಸಾಮಾಜಿಕ ಜವಾಬ್ದಾರಿಯ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.