ಪಶ್ಚಿಮ ಏಷ್ಯಾದಲ್ಲಿನ ಯುದ್ಧದಿಂದಾಗಿ ಜಾಗತಿಕ ಮಟ್ಟದಲ್ಲಿ ಎಲ್ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ಎಲ್ಲರು ಪರ್ಯಾಯವಾಗಿ ಇಂಡಕ್ಷನ್ ಸ್ಟೌವ್‌ಗೆ ಮೊರೆ ಹೋಗುತ್ತಿದ್ದಾರೆ. ಇನ್ನೂ ಮಾರುಕಟ್ಟೆಯಲ್ಲಿ ಹೊಸ ಇಂಡಕ್ಷನ್ ಸ್ಟೌವ್ ಖರೀದಿಸುವ ಜನರಿಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಬೆಸ್ಕಾಂ ಸಲಹೆಯನ್ನು ನೀಡಿದೆ. ಗ್ರಾಹಕರ ದೃಷ್ಠಿಯನ್ನು ಮನದಲ್ಲಿಟ್ಟುಕೊಂಡು ಹೊಸ ಇಂಡಕ್ಷನ್ ಖರೀದಿಸುವಾಗ ಕೇವಲ ಬೆಲೆಯನ್ನು ಮಾತ್ರ ನೋಡದೆ, ಅದರ ಗುಣಮಟ್ಟ ಮತ್ತು ತಾಂತ್ರಿಕ ಸಾಮರ್ಥ್ಯವನ್ನು ಪರಿಶೀಲಿಸುವುದು ಅತ್ಯಗತ್ಯವಾಗಿದೆ ಎಂದು ಬೆಸ್ಕಾಂ ತಿಳಿಸಿದೆ. ಐಎಸ್‌ಐ ಪ್ರಮಾಣಿತ ಹಾಗೂ ವಿದ್ಯುತ್ ದಕ್ಷತೆಯುಳ್ಳ ಇಂಡಕ್ಷನ್ ಸ್ಟೌವ್ ಖರೀದಿಸುವಂತೆ ಹಾಗೂ 3-ಪಿನ್ ಇರುವ ಇಂಡಕ್ಷನ್ ಸ್ಟೌವ್‌ಗಳನ್ನೇ ಖರೀದಿಸಿ ಎಂದು ಬೆಸ್ಕಾಂ ಮಾಹಿತಿ ನೀಡಿದೆ. https://x.com/NammaBESCOM?s