2026-03-07 07:17:31

Bengaluru Police seize drugs worth Rs 1 5 crore | ಬೆಂಗಳೂರು ಪೊಲೀಸರ ಭರ್ಜರಿ ಬೇಟೆ 1 5 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ | Speed News Kannada

Bengaluru Police seize drugs worth Rs 1 5 crore | ಬೆಂಗಳೂರು ಪೊಲೀಸರ ಭರ್ಜರಿ ಬೇಟೆ 1 5 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ | Speed News Kannada

ಬೆಂಗಳೂರು, ಫೆಬ್ರವರಿ 17: ರಾಜ್ಯ ರಾಜಧಾನಿ ಬೆಂಗಳೂರಲ್ಲಿ ದಂಧೆಕೋರರ ಹಾವಳಿ ಮುಂದುವರಿದಿದೆ. ಮೇಲಿಂದ ಮೇಲೆ ನಡೆಯುತ್ತಿರುವ ಖಾಕಿ ಕಾರ್ಯಾಚರಣೆಗೂ ಬಗ್ಗದ ಖದೀಮರು ಪೊಲೀಸರ ಕಣ್ಣಪ್ಪಿಸಿ ದಂಧೆ ಮುಂದುವರಿಸಿದ್ದಾರೆ. ನಗರದ ವಿವಿಧೆಡೆ ಡ್ರಗ್ಸ್ ಮಾರುತ್ತಿದ್ದ ಸೆನೆಗಲ್ ಮೂಲದ ಬ್ಯಾರಿ ಯಾಯ ಅಲಿಯಾಸ್ ಒಕೊಲಿ ಎಂಬಾತನನ್ನು ಬಂಧಿಸಲಾಗಿದ್ದು, ಆರೋಪಿಯಿಂದ ಬರೋಬ್ಬರಿ ಒಂದೂವರೆ ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. 29 LSD 3, 546 ಮಾತ್ರೆ MDMA, 152, 131 , 27 LSD ಸ್ಕ್ರಿಪ್ಸ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿ ಎರಡನೇ ಬಾರಿಗೆ ಬೆಂಗಳೂರಿನಲ್ಲಿ ಬಂಧನಕ್ಕೆ ಒಳಗಾಗಿದ್ದು, ಈ ಹಿಂದೆಯೂ ಈತನನ್ನು ಬಂಧಿಸಿ ಗಡಿಪಾರು ಮಾಡಲಾಗಿತ್ತು. ಆದರೆ ಮತ್ತೆ ಡ್ರಗ್ಸ್ ಮಾರಾಟದಲ್ಲಿ ನಿರತನಾಗಿದ್ದ ಈತ ಖಾಕಿ ಕೈಗೆ ಸಿಕ್ಕಿಬಿದ್ದಿದ್ದು, ಮತ್ತೊಂದು ಹೆಸರಿನಲ್ಲಿ ಆರೋಪಿ ದಾಖಲಾತಿ ಮಾಡಿಸಿಕೊಂಡಿದ್ದೇಗೆ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.ವಶಕ್ಕೆ ಪಡೆಯಲಾದ ಮಾದಕ ವಸ್ತು ಅಕ್ರಮವಾಗಿ ಬೆಂಗಳೂರಿಗೆ ಮಾದಕದ್ರವ್ಯ ಸಾಗಾಣೆ ಮಾಡುತ್ತಿದ್ದ ವಿದೇಶಿ ಮಹಿಳೆಯನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ದೆಹಲಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಕಾಶ್ ಏರ್ ಲೈನ್ಸ್ ನಲ್ಲಿ ಆಗಮಿಸಿದ್ದ ಮಹಿಳಾ ಪ್ರಯಾಣಿಕಳ ಬಳಿ ಇದ್ದ ಸುಮಾರು 2.5 ಕೆಜಿ ಮೆಥಾಂಪೆಟಮೈನ್ ಗಾಂಜಾವನ್ನು ಸೀಜ್ ಮಾಡಲಾಗಿದೆ. ವಶಕ್ಕೆ ಪಡೆಯಲಾದ ಮಹಿಳೆ ನೈಜಿರಿಯಾ ಮೂಲದ ವೆರೋನಿಕಾ ಎಮ್ಯಾನುಯೆಲ್ ಎಂದು ಗೊತ್ತಾಗಿದ್ದು, ಆಕೆಯ ವಿಚಾರಣೆ ಮುಂದುವರಿದಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.