ಬೆಂಗಳೂರು : ಬೆಂಗಳೂರು ಜೈ ಬಾಂಗ್ಲಾ ಘೋಷಣೆ ಕೂಗುವ ಮೂಲಕ ಎಲ್ಲೆಡೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದ ಮಹಿಳೆಗೆ ಹೈಕೋರ್ಟ್ ರಿಲೀಫ್ ಸಿಕ್ಕಿದೆ..
ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಮಹಿಳೆಗೆ ಕರ್ನಾಟಕ ಹೈಕೋರ್ಟ್ ಈಗ ಜಾಮೀನು ಮಂಜೂರು ಮಾಡಿದೆ.
ಆನೇಕಲ್ ತಾಲೂಕಿನ ಹುಲಿಮಂಗಲ ಪೋಡು ಗ್ರಾಮದ ನಿವಾಸಿ ಸರ್ಭಾನು ಖಾತೂನ್ (25) ಗೆ ಜಾಮೀನು ಸಿಕ್ಕಿದ್ದು, ಹೈ ಕೋರ್ಟ್ ರಿಲೀಫ್ ಸಿಕ್ಕಿದೆ.
ಹುಲಿಮಂಗಲ ಪೋಡು ಬಳಿಯ ಶೆಡ್ನಲ್ಲಿ ವಾಸವಿದ್ದ ಸರ್ಭಾನು ಖಾತೂನ್ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆಯ ಸಂದರ್ಭದಲ್ಲಿ ವಿವಾದಕ್ಕೀಡಾಗಿದ್ದರು.
ಸ್ಥಳೀಯ ವ್ಯಕ್ತಿಯೊಬ್ಬರು ವಿಡಿಯೋ ಮಾಡುತ್ತಿದ್ದಾಗ ಅಲ್ಲಿಗೆ ಬಂದ ಮಹಿಳೆಯನ್ನು ಮಾತನಾಡಿಸಿ 'ಭಾರತ್ ಮಾತಾ ಕೀ ಜೈ' ಎನ್ನುತ್ತಾರೆ. ಇದಕ್ಕೆ ಪ್ರತಿಯಾಗಿ ಸಿಟ್ಟಿಗೆದ್ದ ಮಹಿಳೆ 'ಜೈ ಬಾಂಗ್ಲಾ' ಎಂದು ಘೋಷಣೆ ಕೂಗುತ್ತಾರೆ. ಈ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಸದ್ಯ ಜಾಮೀನು ಮಂಜೂರು ಆಗಿದೆ.